ಶಿರಸಿ: ನಗರದಲ್ಲಿ ವಾಸಿಸುವ ನಮಗೆ ಇಂದು ಭೂಮಿತಾಯಿಗೂ ನಮಗೂ ಇರುವ ಸಂಬಂಧ ಮಸುಕಾಗುತ್ತಿದೆ. ಮಾತಾ ಭೂಮಿ: ಪುತ್ರೋಹಮ್ ಪ್ರಥಿವ್ಯಾ: ಭೂಮಿ ನನ್ನ ತಾಯಿ ನಾನು ಅವಳ ಮಗು ಎಂಬುದನ್ನು ನೆನಪಿಸಿಕೊಳ್ಳಬೇಕಾದ ದಿನವಿದು. ನಗರಗಳು ಬೆಳೆದಂತೆ ಪ್ಲಾಸ್ಟಿಕ ಕಸಗಳು ಭೂಮಿಯ ಆಳ ಸೇರುತ್ತಿದೆ. ಪ್ರತಿ ಕ್ಷೇತ್ರದಲ್ಲೂ ಪ್ಲಾಸ್ಟಿಕ್ ಬಳಕೆ ಅನಿವಾರ್ಯ ಎನಿಸುವಷ್ಟು ಕಾಲ ಘಟ್ಟಕ್ಕೆ ನಾವು ತಲುಪಿದ್ದೇವೆ. ಈಗಲೇ ನಾವು ಜಾಗೃತರಾಗದಿದ್ದರೆ ಭೂಮಿತಾಯಿ ಒಡಲಲ್ಲಿ ಪ್ಲಾಸ್ಟಿಕ್ ತುಂಬಿ ಬಂಜರು ಆಗುವುದನ್ನು ತಪ್ಪಿಸಲು ಪ್ಲಾಸ್ಟಿಕ್ ಮುಕ್ತ ಮಾಡಿ ಭೂಮಿ ಹಸಿರುಗೊಳಿಸುವ ಪ್ರಯತ್ನ ನಡೆಯಬೇಕಾಗಿದೆ ಎಂದು ಯೂತ್ ಪಾರ್ ಸೇವಾ ಶಿರಸಿ ಸಲಹಾ ಸಮಿತಿ ಸದಸ್ಯರು ನಿವೃತ್ತ ಪ್ರಾಂಶುಪಾಲ ಕೋಮಲಾ ಭಟ್ ಹೇಳಿದರು.
ಅವರು ಎಪ್ರಿಲ್ 23 ರಂದು ಯೂತ್ ಫಾರ್ ಸೇವಾ ಶಿರಸಿ ಏರ್ಪಡಿಸಿದ್ದ ‘ವಿಶ್ವ ಭೂಮಿ ದಿನ ‘ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಭೂಮಿಯಲ್ಲಿನ ನೈಸರ್ಗಿಕ ಸಂಪತ್ತು ಅತಿಯಾದ ಬಳಕೆಯಿಂದ ಎಲ್ಲವೂ ನಾಶದ ಅಂಚಿನಲ್ಲಿದೆ. ನೈಸರ್ಗಿಕ ಪ್ರಪಂಚವು ಉತ್ಸಾಹದ ದೊಡ್ಡ ಮೂಲವಾಗಿದೆ.ಅದು ಜೀವನವನ್ನು ಮೌಲ್ಯಯುತವಾಗಿಸುತ್ತದೆ. ಅದರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ತಿಳಿಸಿದರು.
ಪ್ರತಿ ದಿನವೂ ಭೂಮಿಯ ದಿನವಾಗಿದೆ. ಭೂಮಿಯ ಸುರಕ್ಷಿತ ಹವಾಮಾನಕ್ಕಾಗಿ ನಮ್ಮ ಭೂಗ್ರಹದಲ್ಲಿ ಹೂಡಿಕೆ ಮಾಡಬೇಕಾಗಿದೆ. ಕೆರೆಯ ನೀರನ್ನು ಕೆರೆಗೆ ಚೆಲ್ಲಿದಂತೆ ಭೂಮಿಯಿಂದ ಪಡೆದ ಲಾಭವನ್ನು ಅದರ ಒಳಿತಿಗಾಗಿಯೇ ವಿನಿಯೋಗಿಸಬೇಕಾಗಿದೆ. ಭೂಮಾಲಿನ್ಯ ತಪ್ಪಿಸಿ ಹಸಿರುಕರಣಗೊಳಿಸಿ ಭೂಮಿಯ ಫಲವತ್ತತೆ ಹೆಚ್ಚಿಸಬೇಕು ಎಂದು ಯೂತ್ ಪಾರ್ ಸೇವಾ ಶಿರಸಿ ಸಲಹಾ ಸಮಿತಿ ಸದಸ್ಯರು, ಅರಣ್ಯ ಮಹಾವಿದ್ಯಾಲಯದ ಡಾ. ಆರ್ ವಾಸುದೇವ್ ಹೇಳಿದರು.

ಶಿರಸಿ ನಗರ ಸಭಾ ಅಧ್ಯಕ್ಷ ಗಣಪತಿ ನಾಯ್ಕ, ತೋಟಗಾರಿಕಾ ಮಹಾವಿದ್ಯಾಲಯದ ಎನ್.ಎಸ್,ಎಸ್ ಅಧಿಕಾರಿ ಡಾ. ಅಶೋಕ ಹರಸೂರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿಮಿತ್ತ ಯೂತ್ ಫಾರ್ ಸೇವಾ ಶಿರಸಿ ಮತ್ತು ತೋಟಗಾರಿಕಾ ಮಹಾವಿದ್ಯಾಲಯದ ಎನ್.ಎಸ್,ಎಸ್ 60 ಜನ ಸ್ವಯಂಸೇವಕರು ಶಿರಸಿ ಕೋಟೆಕೆರೆ ಸುತ್ತ ಪ್ಲಾಸ್ಟಿಕ್ ಮತ್ತು ಕಸಗಳನ್ನು ತೆಗೆದು ಸ್ವಚ್ಚತಾ ಕಾರ್ಯ ಮಾಡಲಾಯಿತು. ಭೂಮಿಯನ್ನು ಫಲವತ್ತಾಗಿ ಮಾಡುವ ಸಂಕಲ್ಪದೊಂದಿಗೆ ಗಿಡಗಳಿಗೆ ಸಾವಯವ ಗೊಬ್ಬರ ಹಾಕಲಾಯಿತು.
ನಗರ ಸಭಾ ಕಾರ್ಮಿಕರು ಹಾಗೂ ಎನ್.ಎಸ್,ಎಸ್ ವಿದ್ಯಾರ್ಥಿ ನಾಯಕ ಭಾರ್ಗವ ಹೆಗಡೆ ಮತ್ತು ಶ್ರೀಲಕ್ಷ್ಮೀ ಪಾಲ್ಗೊಂಡಿದ್ದರು. ಯೂತ್ ಫಾರ್ ಸೇವಾ ಸ್ವಯಂಸೇವಕಿ ಸ್ಪೂರ್ತಿ ಗಂಗೋಳ್ಳಿ ವಂದಿಸಿದರು. ಯೂತ್ ಫಾರ್ ಸೇವಾ ಸಂಯೋಜಕ ಉಮಾಪತಿಭಟ್ಟ್ ಕೆವಿ ಸ್ವಾಗತಿಸಿ ಪ್ರಾಸ್ತವಿಕ ಮಾತನಾಡಿದರು.