ಶಿರಸಿ: ಗ್ರಾಮೀಣ ಅಭಿವೃದ್ದಿ ಚಿಂತನೆ,ಮಹಿಳಾ ಸಬಲೀಕರಣ, ಕಾನೂನು ಮಾರ್ಗದರ್ಶನ ಸೇರಿಸಿ ಜ್ಞಾನ ಪ್ರಸಾರ, ಮಾಹಿತಿ ತರಬೇತಿ ಕಾರ್ಯಕ್ರಮಗಳು, ಸಾಧಕರು ಹಾಗೂ ಪ್ರತಿಭೆಗಳಿಗೆ ಪುರಸ್ಕಾರ ಮುಂತಾದ ಉದ್ದೇಶಗಳೊಂದಿಗೆ ಸ್ಥಾಪನೆಯಾದ ಅನುಬಂಧ ಚಾರಿಟೇಬಲ್ ಟ್ರಸ್ಟ್ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿದೆ.
ಶಿರಸಿಯ ರುದ್ರದೇವರ ಮಠದಲ್ಲಿ ಏ.26ರಂದು ಸಂಜೆ 5 ಗಂಟೆಗೆ ರಾಜ್ಯ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಲಿದ್ದು, ಗುರು ಸಾನ್ನಿಧ್ಯವನ್ನು ಶ್ರೀ ಶ್ರೀ ಮ.ನಿ.ಪ್ರ ನಾಗಭೂಷಣ ಸ್ವಾಮೀಜಿಗಳು. (ಶ್ರೀ ಹೊಳೆ ಮಠ, ಬನವಾಸಿ.) ಸಾನಿಧ್ಯವಹಿಸುವರು. ಗೌರವ ಅಧ್ಯಕ್ಷತೆಯನ್ನು ಪ್ರಗತಿಪರ ಕೃಷಿಕ, ಉದ್ಯಮಿಗಳಾದ ಭೀಮಣ್ಣ ನಾಯ್ಕ್ ಹಾಗೂ ಮುಖ್ಯ ಅತಿಥಿಗಳಾಗಿ ಎಮ್.ಇ.ಎಸ್ ಸಂಸ್ಥೆಯ ಅಧ್ಯಕ್ಷ ಜಿ. ಎಂ. ಹೆಗಡೆ ಮುಳಖಂಡ ಇವರು ಪಾಲ್ಗೊಳ್ಳುವರು.
ಹಿರಿಯ ನಿವೃತ್ತ ಪ್ರಾಧ್ಯಾಪಕ ಪ್ರೊ ಕೆ ಎನ್ ಹೊಸ್ಮನಿ ಸರ್ “ಸಾಮಾಜಿಕ ಕಾರ್ಯಕರ್ತರು ಹಾಗೂ ಸಾರ್ವಜನಿಕ ಸೇವೆಗಳ” ಬಗ್ಗೆ ಉಪನ್ಯಾಸ ನೀಡುವರು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಹಾಗು ಮೋಹಿನಿ ಬೈಲೂರು ಮಾಜಿ ನಗರಸಭಾ ಅಧ್ಯಕ್ಷ ಪ್ರದೀಪ್ ಎಲ್ಲನಕರ ಅವರನ್ನು ಸನ್ಮಾನಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.