ಅಂಕೋಲಾ:ಅಂಕೋಲಾ- ಕಾರವಾರ ಕ್ಷೇತ್ರಕ್ಕೆ ಅನುದಾನವನ್ನು ತಂದು ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಶಾಸಕರು ಗಮನ ಹರಿಸಿದ್ದಾರೆಯೇ ಹೊರತು ಮಾಧವ ನಾಯಕರ ಹೇಳಿಕೆಗಳಿಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಅವರು ನಮ್ಮ ಶಾಸಕಿಯಷ್ಟೇ ಅಲ್ಲದೆ, ನಮ್ಮ ಮನೆಯ ಹೆಣ್ಣು ಮಗಳು. ಯಾರು ಯಾರೋ ಕುಣಿಸಿದಂತೆ ಕುಣಿಯುವ ಕೀಲುಗೊಂಬೆಯಂತಿರುವ ಅವರಿಗೆ ಶಾಸಕಿಯ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಎಂದು ತಾಲೂಕಾ ಬಿಜೆಪಿ ಮಂಡಲಾಧ್ಯಕ್ಷ ಸಂಜಯ್ ನಾಯ್ಕ ಭಾವಿಕೇರಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕಿಗೆ ಹಿಟ್ಲರ್ ಅನ್ನುವ ಮಾಧವ ನಾಯಕರು ತಾವು ಯಾರೆಂದು ಪ್ರಪ್ರಥಮವಾಗಿ ತಿಳಿದುಕೊಳ್ಳಲಿ. ರೂಪಾಲಿ ನಾಯ್ಕರ ಬಗ್ಗೆ ಪದೇ ಪದೇ ಆಪಾದನೆ ಮಾಡುತ್ತಿದ್ದರೆ ನಾವು ಸುಮ್ಮನೆ ಕೂರುವುದಿಲ್ಲ. ನೀವು ಕಾನೂನುಬದ್ಧವಾಗಿ ಹೋರಾಡಿ ಹೊರತು ನಾಲಿಗೆ ಇದೆ ಎಂದು ಏನೇನೋ ಹೇಳುವುದಲ್ಲ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ನೀವು ನಿಮ್ಮ ನಾಲಿಗೆಯನ್ನು ನಿಯಂತ್ರಣದಲ್ಲಿಟ್ಟು ಬದಲಾಗಿ, ಬದಲಾಗದಿದ್ದರೆ ನಿಮ್ಮ ಮನೆಗೆ ಮುತ್ತಿಗೆ ಹಾಕುತ್ತೇವೆ, ಎಚ್ಚರವಿರಲಿ ಎಂದರು.
ಬಿಜೆಪಿ ಪ್ರಮುಖ ಜಗದೀಶ ನಾಯಕ ಮೊಗಟಾ ಮಾತನಾಡಿ, ಅಂಕೋಲಾ- ಕಾರವಾರ ಕ್ಷೇತ್ರದಲ್ಲಿ 46 ಸಾವಿರ ಮತದಾರರಿರುವ ದೊಡ್ಡ ಸಮಾಜದವರಾದ ಮಾಧವ ನಾಯಕರಿಗೆ ಕಳೆದ ಚುನಾವಣೆಯಲ್ಲಿ ಎರಡೂವರೆ ಸಾವಿರ ಮತಗಳನ್ನು ಪಡೆದು ತನ್ನ ಸಾಧನೆಯನ್ನು ತೋರಿದ್ದಾರೆ. ಅವರ ಸಮಾಜದವರೇ ಅವನ್ನು ತಿರಸ್ಕರಿಸಿದ್ದಾರೆ. ಕಾರವಾರ ಗುತ್ತಿಗೆದಾರರ ಪರಿಸ್ಥಿತಿ ಕಂಗೆಟ್ಟಿದೆ. ಇಂತಹ ಮತಿಗೇಡಿಯನ್ನು ಅಧ್ಯಕ್ಷನನ್ನಾಗಿ ಮಾಡಿ ತೊಂದರೆ ಅನುಭವಿಸುತ್ತಿದ್ದೇವೆ ಎನ್ನುತ್ತಿದ್ದಾರೆ. ಹಿಂಬದಿಯಿಂದ ಕಿವಿ ಕಚ್ಚಿ ನಿಮ್ಮನ್ನು ಕೀಲುಗೊಂಬೆಯಾಗಿ ಆಟ ಆಡಿಸಲಾಗುತ್ತಿದೆ ಎಂಬುದು ಎಲ್ಲರೂ ಅರಿತ ಸಂಗತಿ. ಪದೇ ಪದೇ ಶಾಸಕಿಯನ್ನು ಗುರಿಯಾಗಿಸಿಕೊಂಡು ತೇಜೋವಧೆ ಮಾಡುವುದು ಒಳ್ಳೆಯ ನಡೆಯಲ್ಲ ಎಂದರು.
ರಾಜೇಂದ್ರ ನಾಯ್ಕ, ಮಾಧವ ನಾಯಕನ ಬಳಿ ಯಾರು ಹೊಂದಾಣಿಕೆ ಮಾಡಿಕೊಳ್ಳುತ್ತಾರೋ ಅವರ ಪಾರ್ಟಿ. ಕಾರವಾರದಲ್ಲಿ ನಾಲ್ಕೈದು ಮಂದಿಯ ಗುಂಪಿದೆ ಯಾರೇ ಶಾಸಕರಾದರು ಅವರ ಬೆನ್ನು ಬೀಳುವುದು, ಬ್ಲಾಕ್‍ಮೇಲ್ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುವುದು. ನಿಮ್ಮ ಹತ್ತಿರ ಭ್ರಷ್ಟಾಚಾರದ ದಾಖಲೆಗಳಿದ್ದರೆ ನೇರವಾಗಿ ಸಿಬಿಐ ಬಳಿ ತೆರಳಿ ಪ್ರಕರಣ ದಾಖಲಿಸಿ, ಯಾರು ಬೇಡ ಎನ್ನುವುದಿಲ್ಲ. ಬದಲಾಗಿ ಒಂದು ಹೆಣ್ಣು ಮಗಳೆನ್ನುವ ಕಾರಣಕ್ಕೆ ಏನೇನೋ ಹೇಳಿದರೆ ನಾವು ಸಹಿಸುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ರಾಘು ಭಟ್, ಹೂವಾ ಖಂಡೇಕರ್, ನಾಗೇಶ್ ಕಿಣಿ, ರೇಖಾ ಗಾಂವ್ಕರ್, ತಾರಾ ಗಾಂವ್ಕರ್, ಪ್ರವೀಣ್ ನಾಯ್ಕ, ಚಂದ್ರಕಾಂತ ನಾಯ್ಕ, ಅನುರಾಧ ನಾಯ್ಕ, ಸಂದೀಪ್ ಗಾಂವ್ಕರ್, ಬಾಲಕೃಷ್ಣ ನಾಯ್ಕ, ಗಣಪತಿ ನಾಯ್ಕ, ನಾಗರಾಜ್ ನಾಯ್ಕ ಮುಂತಾದವರು ಇದ್ದರು.
ಅಂಕೋಲಾ: ಅಂಕೋಲಾ- ಕಾರವಾರ ಕ್ಷೇತ್ರಕ್ಕೆ ಅನುದಾನವನ್ನು ತಂದು ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಶಾಸಕರು ಗಮನ ಹರಿಸಿದ್ದಾರೆಯೇ ಹೊರತು ಮಾಧವ ನಾಯಕರ ಹೇಳಿಕೆಗಳಿಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಅವರು ನಮ್ಮ ಶಾಸಕಿಯಷ್ಟೇ ಅಲ್ಲ, ನಮ್ಮ ಮನೆಯ ಹೆಣ್ಣು ಮಗಳು. ಯಾರು ಯಾರೋ ಕುಣಿಸಿದಂತೆ ಕುಣಿಯುವ ಕೀಲುಗೊಂಬೆಯಂತಿರುವ ಅವರಿಗೆ ಶಾಸಕಿಯ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಎಂದು ತಾಲೂಕಾ ಬಿಜೆಪಿ ಮಂಡಲಾದ್ಯಕ್ಷ ಸಂಜಯ್ ನಾಯ್ಕ ಭಾವಿಕೇರಿ ಹೇಳಿದರು.