ಕಾರವಾರ: ನಗರದ ಅಜ್ವಿ ಹೊಟೇಲ್ ಹಿಂಬದಿಗೆ ಗಾಂಜಾ ಇಟ್ಟುಕೊಂಡಿದ್ದ ಈರ್ವರನ್ನು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಶಿರವಾಡ ಬಂಗಾರಪ್ಪನಗರದ ರಾಜೇಶ ವಡ್ಡರ ಹಾಗೂ ಜಾಂಬಾ ಕ್ರಾಸ್‍ನ ಮಣಿಕಂಠ ರಾಥೋಡ ಬಂಧಿತರಾಗಿದ್ದು ಇವರಿಂದ 10,000 ರೂ. ಬೆಲೆಯ 210 ಗ್ರಾಂ ಗಾಂಜಾ ಹಾಗೂ ಸ್ಕೂಟರ್ ಅನ್ನು ಜಪ್ತಿಪಡಿಸಿಕೊಳ್ಳಲಾಗಿದೆ.
ನಗರ ಪೊಲೀಸ್ ಠಾಣಾ ಪಿಎಸ್‍ಐ ಸಂತೋಷಕುಮಾರ ಎಮ್. ಅವರಿಗೆ ಸಿಕ್ಕ ಖಚಿತ ಮಾಹಿತಿಯ ಮೇರೆಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬದರಿನಾಥ, ಡಿವೈಎಸ್‍ಪಿ ವೆಲಂಟೈನ್ ಡಿಸೋಜಾ ಹಾಗೂ ಪೊಲೀಸ್ ಇನ್‍ಸ್ಪೆಕ್ಟರ್ ಸಿದ್ದಪ್ಪ ಎಸ್.ಬೀಳಗಿ ಮಾರ್ಗದರ್ಶನದಂತೆ ಪೊಲೀಸರು ದಾಳಿ ನಡೆಸಿದ್ದರು. ಈ ತಂಡದಲ್ಲಿ ಕಾನ್‍ಸ್ಟೇಬಲ್‍ಗಳಾದ ರಾಜೇಶ ಎಚ್.ನಾಯಕ, ರಾಘವೇಂದ್ರ ಎಚ್.ನಾಯಕ, ನಾಮದೇವ ನಾಂದ್ರೆ, ಮಹೇಶ ನಾಯ್ಕ, ಜಟ್ಟಿ ಎಮ್.ನಾಯ್ಕ ಭಾಗವಹಿಸಿದ್ದರು. ಕಾರ್ಯಾಚರಣೆ ನಡೆಸಿದ ನಗರ ಪೊಲೀಸ್ ತಂಡಕ್ಕೆ ಎಸ್‍ಪಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.