ಯಲ್ಲಾಪುರ: ತಾಲೂಕಿನ ಉಮ್ಮಚಗಿ ಗ್ರಾ.ಪಂ ವ್ಯಾಪ್ತಿಯ ಬಾಳೆಗದ್ದೆಯಲ್ಲಿ ಹಸುವೊಂದು ಬಾವಿಗೆ ಬಿದ್ದ ಘಟನೆ ನಡೆದಿದೆ.
ರಾಮಚಂದ್ರ ಕೃಷ್ಣಪ್ಪ ಗುನಗಾ ಎನ್ನುವವರ ಹಿತ್ತಲಿನಲ್ಲಿದ್ದ ಬಾವಿಗೆ ಹಸುವೊಂದು ಆಕಸ್ಮಿಕವಾಗಿ ಬಿದ್ದ ಸದ್ದಿಗೆ ಮನೆಯವರೆಲ್ಲ ಎದ್ದು ಬಂದು ನೋಡಿದರೆ ಬಾವಿಯಲ್ಲಿ ಹಸು ಒದ್ದಾಡುತ್ತಿರುವುದು ಕಾಣಿಸಿತು.
ತಕ್ಷಣ112ಕ್ಕೆ ಕರೆ ಮಾಡಿದ್ದು, ಅಗ್ನಿಶಾಮಕ ಠಾಣಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಹಸುವಿನ ಪ್ರಾಣ ಉಳಿಸುವ ಪ್ರಯತ್ನ ಮಾಡಿದರಾದರೂ ಗಾಳಿಯಾಡದ ಆಳದ ತೆರೆದ ಬಾವಿಯಾದ್ದರಿಂದ ಬಿದ್ದ ಹಸು ಮೃತಪಟ್ಟಿತ್ತು.
ಹಸುವನ್ನು ಮೇಲೆತ್ತುವ ಕಾರ್ಯಾಚರಣೆಯಲ್ಲಿ ಭಾಗಿಯಾದ ಠಾಣಾಧಿಕಾರಿಗಳಾದ ಶಂಕರ ಅಂಗಡಿ, ಸಿಬ್ಬಂದಿ ನಾಗೇಶ ದೇವಾಡಿಗ, ಹನುಮಂತ ನಾಯಕ, ಟೋನಿ,ಸಂತೋಷ ಇತರರು ಭಾಗವಹಿಸಿದ್ದರು.