• Slide
    Slide
    Slide
    previous arrow
    next arrow
  • ಏ.26ಕ್ಕೆ ಕುಮಟಾದಲ್ಲಿ ತಾಲೂಕಾ ಮಟ್ಟದ ಆರೋಗ್ಯ ಮೇಳ

    300x250 AD

    ಕುಮಟಾ: 75ನೇ ವರ್ಷದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ತಾಲೂಕಾ ಮಟ್ಟದ ಆರೋಗ್ಯ ಮೇಳ ಏ.26ರ ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಯಲಿದೆ ಎಂದು ತಾಲ್ಲೂಕು ಆರೋಗ್ಯಧಿಕಾರಿ ಡಾ.ಆಜ್ಞಾ ನಾಯಕ ತಿಳಿಸಿದ್ದಾರೆ.

    ಈ ಮೇಳದಲ್ಲಿ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ನಿಡಲಾಗುವದು. ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆ, ಪಿಎಂಜೆಏವೈ ಡಿಜಿಟಲ್ ಐಡಿ ಕಾರ್ಡ್ ನೋಂದಣಿ ಮಾಡಲಾಗುತ್ತದೆ. ಸಕ್ಕರೆ ಕಾಯಿಲೆ, ರಕ್ತದೊತ್ತಡ, ಕ್ಯಾನ್ಸರ್ ಕಾಯಿಲೆಗಳಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸೆ, ನೇತ್ರಾದಾನ ನೋಂದಣಿ ಕುರಿತು ಮಾಹಿತಿ ಮತ್ತು ಆರೋಗ್ಯ ಸೇವೆಗಳ ಜಾಗೃತಿ, ಉಚಿತ ಪ್ರಯೋಗಾಲಯ ಸೇವೆ ಮತ್ತು ಔಷಧಿ ವಿತರಣೆ, ಶ್ರವಣದೋಷ ಹಾಗೂ ಕಣ್ಣಿನ ತಪಾಸಣೆ, ಆರೋಗ್ಯ ಶಿಕ್ಷಣ, ಆಹಾರ ಸಮಾಲೋಚನೆ ಮತ್ತು ಪೌಷ್ಟಿಕ ಪ್ರಾತ್ಯಕ್ಷಿಕೆ, ಆಹಾರ ಕಲಬೆರಕೆ ಪರೀಕ್ಷೆ ಮತ್ತು ಜಾಗೃತಿ, ಸಾಂಕ್ರಾಮಿಕ ರೋಗ ಮತ್ತು ಸಾಮಾನ್ಯ ಕಾಯಿಲೆಗಳಿಗೆ ಚಿಕಿತ್ಸೆ ಮತ್ತು ಔಷಧ ವಿತರಣೆ, ಕ್ಷಯರೋಗ, ಎಚ್‍ಐವಿ ಹಾಗೂ ಜನನಾಂಗ ಸೋಂಕುಗಳ ತಪಾಸಣೆ ಮತ್ತು ಆಪ್ತಸಮಾಲೋಚನೆ, ಹದಿಹರೆಯದವರಿಗೆ ಜೀವನ ಕೌಶಲ್ಯ ಮಾರ್ಗದರ್ಶನ ಮತ್ತು ಆಪ್ತಸಮಾಲೋಚನೆ, ಧೂಮಪಾನ ಮತ್ತು ತಂಬಾಕು ಸೇವನೆಯ ವಿರುದ್ಧ ಜಾಗೃತಿ ಮತ್ತು ಆಪ್ತಸಮಾಲೋಚನೆ, ಕುಟುಂಬ ಕಲ್ಯಾಣ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಆಪ್ತಸಮಾಲೋಚನೆ, ತಾಯಿ- ಮಕ್ಕಳ ಆರೋಗ್ಯ ಕುರಿತು ಮಾಹಿತಿ ಮತ್ತು ಕೋವಿಡ್ ಲಸಿಕೆ ಕುರಿತು ಅರಿವು ಕಾರ್ಯ ನಡೆಯಲಿದೆ ಎಂದು ಅವರು ವಿವರಿಸಿದ್ದಾರೆ.

    300x250 AD

    ಇವೆಲ್ಲದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು. ಕಡ್ಡಾಯವಾಗಿ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ತರಬೇಕು ಎಂದು ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top