ಕಾರವಾರ: ಮಾದಕ ವಸ್ತುಗಳ ಸೇವನೆಯಿಂದ ಅಪರಾಧ ಹೆಚ್ಚುತ್ತವೆ. ಅದರಿಂದ ಅವುಗಳ ಸೇವನೆ ಮಾನವನಿಗೆ ಆರ್ಥಿಕ, ಮಾನಸಿಕ, ದೈಹಿಕ ಕುಂಟಿತಗಳನ್ನು ಉಂಟುಮಾಡುತ್ತದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಭದ್ರಿನಾಥ್ ಹೇಳಿದರು.
ಜಿಲ್ಲಾ ಕಾರಾಗ್ರಹದಲ್ಲಿ ವಿಚಾರಣಾಧೀನ ಖೈದಿಗಳಿಗೆ ನಕಲಿ ಸಾರಾಯಿ ಮತ್ತು ನಿದ್ರಾಜನಕ ಔಷಧಿಗಳು ಹಾಗೂ ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳುವಳಿಕೆ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು.
ಆರ್‍ಎಂಒ ಡಾ.ವೆಂಕಟೇಶ್ ಮಾತನಾಡಿ, ಮಾದಕ ವಸ್ತುಗಳ ಬಳಕೆಯಿಂದ ಆಗುವ ದೈಹಿಕ ದುಷ್ಪರಿಣಾಮಗಳ ಬಗ್ಗೆ ವಿವರಿಸಿದರು. ಅಬಕಾರಿ ನಿರೀಕ್ಷಕ ಬಸವರಾಜ ಕರವಿನಕೊಪ್ಪ, ಬಂಧಿಗಳು ಮಾದಕ ವಸ್ತುಗಳ ಸಾಗಾಟ, ಮಾರಾಟ, ಸೇವನೆ ಬಗ್ಗೆ ಇಲಾಖೆಗೆ ಮಾಹಿತಿ ನೀಡಿ ಪ್ರಕರಣ ಪತ್ತೆ ಹಚ್ಚಲು ಸಹಕರಿಸಿದರೆ ಉತ್ತಮ ಸಮಾಜ ಕಟ್ಟಲು ಅನುಕೂಲವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಡಿವೈಎಸ್‍ಪಿ ಅರವಿಂದ್ ಕಲಗುಜ್ಜಿ, ಜೈಲರ್ ಈರಣ್ಣ ರಂಗಪುರ ಹಾಗೂ ಇತರರು ಇದ್ದರು.