ಕುಮಟಾ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಗ್ರಾಮ ಪಂಚಾಯತ ಹೆಗಡೆ ಮತ್ತು ಕೋಡ್ಕಣಿ ಹಾಗೂ ವಿವಿಧ ಸಂಘ- ಸಂಸ್ಥೆಗಳ ಆಶ್ರಯದಲ್ಲಿ ಹೆಗಡೆ ಶ್ರೀಶಾಂತಿಕಾಂಬ ಹೈಸ್ಕೂಲ್ನಲ್ಲಿ ಬಾಲಮೇಳ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ದಿನಕರ ಕೆ.ಶೆಟ್ಟಿ ಮಾತನಾಡಿ, ಮಕ್ಕಳ ತಾಯಂದಿರು ಮಕ್ಕಳಲ್ಲಿರುವ ಧನಾತ್ಮಕ ಗುಣವನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಮಕ್ಕಳು ಪ್ರತಿಭಾನ್ವಿತರಾಗಿ ಬೆಳೆಯಲು ಸಾಧ್ಯ. ನಮ್ಮ ಸರಕಾರ ಅಂಗನವಾಡಿ ಮಕ್ಕಳಿಗೆ ಪ್ರೋತ್ಸಾಹ ನೀಡಿದ್ದೇವೆ. ಕೊರೋನಾ ಸಂದರ್ಭದಲ್ಲಿ ನಮ್ಮ ಅಂಗನವಾಡಿ ಕಾರ್ಯಕರ್ತರು ಉತ್ತಮವಾಗಿ ಸೇವೆ ಸಲ್ಲಿಸಿದ್ದರು. ನನ್ನ ಕ್ಷೆತ್ರದಲ್ಲಿ ಮಕ್ಕಳಿಗೆ ಉತ್ತಮವಾಗಿ ಅಂಗನವಾಡಿ ನಿರ್ಮಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಚಂದ್ರಕಲಾ ಪಟಗಾರ, ಶಾಂತಾರಾಮ ನಾಯ್ಕ, ಎಸ್.ಎಸ್.ಭಟ್, ಬಿ.ಎಸ್.ಶಾನಭಾಗ, ಮಂಜುನಾಥ ಪಟಗಾರ, ಮುಕ್ತಾ ನಾಯ್ಕ, ಅಣ್ಣಪ್ಪ ನಾಯ್ಕ, ಕಲ್ಪನಾ ನಾಯ್ಕ, ಮಂಜುನಾಥ್ ನಾಯ್ಕ ನಾಗವೇಣಿ ಮುಕ್ರಿ, ಶಿವಾನಂದ ಪಟಗಾರ, ರಾಮಚಂದ್ರ ಪಟಗಾರ ಇದ್ದರು.