• Slide
    Slide
    Slide
    previous arrow
    next arrow
  • ಹೆಗ್ಗರಣಿ ಬಳಿ ಮರಿ ಹೆಬ್ಬಾವನ್ನು ನುಂಗಲು ಪ್ರಯತ್ನಿಸಿದ ಕಾಳಿಂಗ ಸರ್ಪ; ವಿಡಿಯೋ ವೈರಲ್

    300x250 AD

    ಸಿದ್ದಾಪುರ: ತಾಲೂಕಿನ ಗ್ರಾಮೀಣ ಭಾಗವಾದ ಹೆಗ್ಗರಣಿ ಸಮೀಪದ ಹಳೇಹಳ್ಳದಲ್ಲಿ ಕಾಳಿಂಗ ಸರ್ಪವೊಂದು ಹೆಬ್ಬಾವಿನ ಮರಿಯನ್ನು ನುಂಗಲು ಪ್ರಯತ್ನಿಸಿದ ಘಟನೆ ನಡೆದಿದೆ.

    ಇಲ್ಲಿಯ ನಾರಾಯಣ ಹೆಗಡೆಯವರ ಕೊಟ್ಟಿಗೆ ಸಮೀಪದ ಗೊಬ್ಬರ ಗುಂಡಿ ಬಳಿ ಬಂದಿದ್ದ ಕಾಳಿಂಗ ಸರ್ಪ ಹೆಬ್ಬಾವಿನ ಮರಿಯನ್ನು ನುಂಗಲು ಪ್ರಯತ್ನಿಸಿದೆ. ಮನೆಯ ಕೆಲಸಾದಾಳುವಿಗೆ ಈ ಕಾಳಿಂಗ ಸರ್ಪವು ಮೊದಲು ಗೋಚರಿಸಿದ್ದು, ಕೂಡಲೇ ಸುತ್ತ ಮುತ್ತಲ ಜನರು ಸ್ಥಳಕ್ಕೆ ಆಗಮಿಸಿದರು. ಅರಣ್ಯ ಇಲಾಖೆಯ ಅಧಿಕಾರಿಗಳೂ ಸಹ ಘಟನಾ ಸ್ಥಳದಲ್ಲಿ ಹಾಜರಿದ್ದು, ಉರಗ ತಜ್ಞ ಕುಮಟಾದ ಕತಗಾಲಿನ ಪವನ್ ನಾಯ್ಕ
    ಸಂಜೆ ವೇಳೆಗೆ ಆಗಮಿಸಿ ಹಾವನ್ನು ಹಿಡಿದು ರಕ್ಷಿಸುವಲ್ಲಿ ಯಶಸ್ಸಾಗಿದ್ದಾರೆ.

    300x250 AD

    ಕಾಳಿಂಗ ಸರ್ಪವು ಹೆಬ್ಬಾವನ್ನು ನುಂಗಲು ಪ್ರಯತ್ನಿಸಿ, ಸಾಧ್ಯವಾಗದೇ ಅರ್ಧ ನುಂಗಿದ್ದ ಹಾವನ್ನು ಹೊರ ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top