ಯಲ್ಲಾಪುರ: ಅಪಘಾತದಲ್ಲಿ ಗಾಯಗೊಂಡವರ ನೆರವಿಗೆ ಬಂದು ತನ್ನ ವಾಹನದಲ್ಲಿಯೇ ಆಸ್ಪತ್ರೆಗೆ ಸಾಗಿಸುವ ಮೂಲಕ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಮಾನವೀಯತೆ ತೋರಿದ್ದಾರೆ.
ಕಾರ್ಯಕ್ರಮದ ನಿಮಿತ್ತ ಸಚಿವ ಶಿವರಾಮ್ ಹೆಬ್ಬಾರ್ ಯಲ್ಲಾಪುರದಿಂದ ಮುಂಡಗೋಡಿಗೆ ತೆರಳುವ ವೇಳೆ ಮುಂಡಗೋಡ ರಸ್ತೆಯ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾನಿಲಯದ ಹತ್ತಿರದ ಸಹಸ್ರಳ್ಳಿ ಸಮೀಪ ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನ ಸಚಿವರು ಗಮನಿಸಿದ್ದರು.
ತಕ್ಷಣ ವಾಹನದಿಂದ ಇಳಿದ ಸಚಿವರು ಗಾಯಗೊಂಡವರಿಗೆ ಉಪಚರಿಸಿ, ಪ್ರಥಮ ಚಿಕಿತ್ಸೆ ನೀಡಿ ತಮ್ಮ ಕಾರಿನಲ್ಲಿಯೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಗಾಯಗೊಂಡವರನ್ನ ಸಾಗಿಸುವ ಮೂಲಕ ಮಾನವೀಯತೆ ತೋರಿದ್ದು ಸಚಿವರ ಕಾರ್ಯಕ್ಕೆ ಹಲವರು ಮೆಚ್ಚುಗೆ ಸಹ ವ್ಯಕ್ತಪಡಿಸಿದರು.