ಸಿದ್ದಾಪುರ: ತಾಲೂಕಿನ ಶೃಂಗೇರಿ ಶಂಕರಮಠದಲ್ಲಿ ಗುಂಜಗೋಡಿನ ಸಾಕೇತ ಪ್ರಕಾಶನ ಆಯೋಜಿಸಿದ ವೇ. ಸೀತಾರಾಮ ಭಟ್ ಅಡವಿತೋಟ ಅವರ ಸಂಸ್ಮರಣೆ,ಮಂತ್ರ ಮಂದಾರ ಕನ್ನಡ ಲಿಪಿಯ ದ್ವಿತೀಯ ಮುದ್ರಣ, ಜಾತಕಾವಳಿ, ತರ್ಪಣೀಯರು ಕೃತಿಗಳ ಬಿಡುಗಡೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.
ಅಭಿನಂದನಾ ಮಾತುಗಳನ್ನಾಡಿದ ನಿವೃತ್ತ ಸಂಸ್ಕೃತ ಪ್ರಾಧ್ಯಾಪಕ ಗಂಗಾಧರ ಭಟ್ ಅಗ್ಗೆರೆ ‘ನಮ್ಮ ಪರಂಪರೆಯ ಕುರಿತು ನಾವು ಬಹಳಷ್ಟು ನಿರ್ಲಕ್ಷ್ಯ ವಹಿಸಿದ್ದೆವೆ. ಇತಿಹಾಸದ ಹಲವು ಮಾಹಿತಿಗಳ ಕುರಿತು ಅರಿತುಕೊಳ್ಳುವ ಅಗತ್ಯವಿದೆ. ಸಾಕೇತ ಪ್ರಕಾಶನ ಮಂತ್ರ ಮಂದಾರದಂತ ಅಮೂಲ್ಯ ,ಅಗತ್ಯ ಕೃತಿಗಳನ್ನು ಪ್ರಕಟಿಸಿದೆ. ಧರ್ಮವನ್ನು ಕೇಂದ್ರವಾಗಿಟ್ಟುಕೊಂಡು ಸಾಧನೆ ಮಡಿದ ಧರ್ಮ ಪ್ರಚೋದಕರನ್ನು, ಧರ್ಮಧಾರಣ ಮಾಡಿದವರನ್ನು ಧರ್ಮ ನಿರ್ವಾಹಕರನ್ನು ಸನ್ಮಾನಿಸುವ ಮೂಲಕ ಸಜ್ಜನರನ್ನು ಗುರುತಿಸುವ ಕೆಲಸ ಮಾಡುತ್ತಿದೆ’ ಎಂದರು .
ಕೃತಿಗಳ ಬಿಡುಗಡೆಗೊಳಿಸಿ ಮಾತನಾಡಿದ ಆಶಾಕಿರಣ ಟ್ರಸ್ಟ್ ಅಧ್ಯಕ್ಷ ಡಾ ರವಿ ಹೆಗಡೆ ‘ಧರ್ಮದ ಜಿಜ್ಞಾಸೆ ಉಂಟಾದಾಗ ಇಂಥ ಗ್ರಂಥಗಳು ಸಹಾಯಕಾರಿಯಾಗುತ್ತದೆ . ಧರ್ಮದ ಆಚರೆಣೆಗೆ ಮೌಲ್ಯ ತರುವ ಕೆಲಸ ಆಗಬೇಕಿದೆ’ ಎಂದರು.
ವೇ.ಜಯರಾಮ್ ಭಟ್ ಮಾತನಾಡಿ, ಕೌಟುಂಬಿಕವಾದ ಸಾಮಾಜಿಕ ಮೌಲ್ಯಗಳನ್ನು ಇಟ್ಟುಕೊಂಡು ಬಂದ ಕುಟುಂಬದವರಾದ ಸೀತಾರಾಮ್ ಭಟ್ಟರು ಪೌರೋಹಿತ್ಯವನ್ನು ಕರ್ತವ್ಯವೆಂದು ನಿರ್ವಹಿಸಿದವರು. ಎಂದರು.
ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಸಾಕೇತ ಪ್ರಕಾಶನದ ಕಾರ್ಯವೈಖರಿಯನ್ನು ಪ್ರಶಂಶಿಸಿದರು .ವಿಲಾಸಿನಿ ಮತ್ತು ವೇ. ನಂದನ್ ಭಟ್, ಹುಲಿಮನೆ, ಸುನಂದಾ ಮತ್ತು ಶ್ರೀಕಾಂತ್ ಆನವಟ್ಟಿ, ಬನವಾಸಿ, ಗಂಗಾ ಮತ್ತು ಚಂದ್ರಶೇಖರ್ ಹೆಗಡೆ ಕೊಡ್ತಗಣಿ ದಂಪತಿಯನ್ನು ಸನ್ಮಾನಿಸಲಾಯಿತು ವೇ . ಮಹಾಬಲೇಶ್ವರ್ ಭಟ್ ಹಿರೇಕೈ ಸ್ವಾಗತಿಸಿದರು, ವಿ, ಶಂಕರ್ ಭಟ್ ಬಾಲಿಗದ್ದೆ ಪ್ರಾಸ್ತಾವಿಕ ಮಾತುಗಳನ್ನಾಡಿದರು ವಿ. ಶೇಷಗಿರಿ ಭಟ್ ಗುಂಜಗೋಡ್ ನಿರೂಪಿಸಿದರು