• Slide
    Slide
    Slide
    previous arrow
    next arrow
  • ಬಂಧನಕ್ಕೊಳಗಾದ ಪಾಕಿಸ್ತಾನಿ ಮಹಿಳೆಯ ಪತಿ ಹೃದಯಾಘಾತದಿಂದ ಸಾವು

    300x250 AD

    ಭಟ್ಕಳ :ಕಳೆದ ವರ್ಷ ಭಟ್ಕಳದಲ್ಲಿ ಬಂಧಿಸಿದ ಪಾಕಿಸ್ತಾನ ಪ್ರಜೆ ಖತೀಜಾ ಮೆಹ್ರೀನ್ ಪತಿ ಜಾವೇದ್ ಮೋಹಿದ್ದಿನ್ ರುಕ್ನುದ್ದಿನ್ ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಭಟ್ಕಳದಲ್ಲಿ 2014 ರಲ್ಲಿ ಪಾಕಿಸ್ತಾನ ಪ್ರಜೆ ಖತೀಜಾ ಮೆಹ್ರೀನ್ ಕಾನೂನು ಬಾಹಿರವಾಗಿ ಭಾರತದೊಳಗೆ ನುಸುಳಿ ಅನಧಿಕೃತವಾಗಿ ಭಟ್ಕಳದ ನವಾಯತ ಕಾಲೋನಿ ವೈಟ್ ಹೌಸ್ ಮನೆಯಲ್ಲಿ ವಾಸವಾಗಿದ್ದಳು.

    ಈ ಬಗ್ಗೆ ಮಾಹಿತಿ ಕಲೆ ಹಾಕಿದ ಭಟ್ಕಳ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆಕೆಯನ್ನು ಕಳೆದ ವರ್ಷ ಜೂ.9 ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಆಕೆಯನ್ನು ಬಂದಿಸಿದ್ದರು. ಈಕೆಯ ಪತಿ ಭಟ್ಕಳ ನವಾಯತ್ ಕಾಲೋನಿ ನಿವಾಸಿಯಾದ ಜಾವೇದ್ ಮೋಹಿದ್ದಿನ್ ರುಕ್ನುದ್ದಿನ್ ನೂರೂಲಾ ಅಮೀನ್ ರುಕ್ನುದ್ದಿನ್ , ನಿನ್ನೆ ಆರೋಗ್ಯದಲ್ಲಿ ಏರುಪೇರು ಆದ ಕಾರಣ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಗೆ ದಾಖಲಾಗಿದ್ದು, ಚಿಕಿತ್ಸೆ ಫಲಿಸದೆ ಹೃದಯಾಘಾತದಿಂದ ನಿಧನ ಹೊಂದಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಮೃತ ವ್ಯಕ್ತಿ ಎರಡು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಗುವನ್ನು ಅಗಲಿದ್ದಾರೆ. 

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top