ಅಂಕೋಲಾ: ರೈತರ ಬೇಡಿಕೆಗಳಿಗಾಗಿ ಹೋರಾಡಲು ಪ್ರತಿ ಗ್ರಾಮದಲ್ಲಿ ರೈತ ಸಂಘದ ಘಟಕಗಳು ರಚನೆ ಆಗಬೇಕಾಗಿದೆ, ಅರಣ್ಯ ಅತಿಕ್ರಮಣ ಭೂಮಿ ಸಕ್ರಮಕ್ಕೆ ಹೋರಾಟ ತೀವ್ರಗೊಳಿಸಬೇಕಾಗಿದೆ ಎಂದು ಜಿಲ್ಲಾ ಸಮಿತಿ ಅಧ್ಯಕ್ಷ ಶಾಂತಾರಾಮ ನಾಯಕ ಹೇಳಿದರು .
ಕರ್ನಾಟಕ ಪ್ರಾಂತ ರೈತ ಸಂಘದ ಅಂಕೋಲಾ ತಾಲೂಕಿನ ವಾಸರೆ ಗ್ರಾಮ ಘಟಕವನ್ನು, ಗ್ರಾಮದಲ್ಲಿ ನಡೆದ ರೈತರ ಸಭೆಯಲ್ಲಿ ಉದ್ಘಾಟಿಸಿದ ಅವರು ರೈತರನ್ನುದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ವಾಸರೆ ಗ್ರಾಮದ ನೂತನ ರೈತ ಸಮಿತಿ ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಹಿರಿಯ ರೈತರಾದ ವೆಂಕಟರಾಯ ನಾಯಕ, ಉಪಾಧ್ಯಕ್ಷರಾಗಿ ಚಂದ್ರಕಾಂತ ಬಿ.ನಾಯಕ, ಕಾರ್ಯದರ್ಶಿಯಾಗಿ ಅರವಿಂದ ವಿ.ನಾಯಕ ಆಯ್ಕೆಯಾದರು. ಸಮಿತಿ ಸದಸ್ಯರಾಗಿ ಗುರುರಾಜ ನಾಯಕ, ನೇಸರ ಎಸ್.ನಾಯಕ, ವಿಜೇತ ಜಿ.ನಾಯಕ, ಜನಾರ್ದನ ಡಿ.ನಾಯಕ, ಮಂಜುನಾಥ್ ಎನ್.ಗೌಡ, ತುಳಸು ಜಿ.ಗೌಡ ಮತ್ತು ಹರಿಶ್ಚಂದ್ರ ಬಿ.ನಾಯಕ ಆಯ್ಕೆಯಾದರು.