• Slide
    Slide
    Slide
    previous arrow
    next arrow
  • ಕೆವಿಜಿಬಿ ಬ್ಯಾಂಕ್ ನ ವ್ಯವಸ್ಥಾಪಕರ ಸೇವೆ ಮುಂದುವರಿಕೆಗೆ ಒತ್ತಾಯ

    300x250 AD

    ಯಲ್ಲಾಪುರ: ತಾಲ್ಲೂಕಿನ ವಜ್ರಳ್ಳಿಯ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಕಳೆದ‌ಮೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಅರವಿಂದ ಪೂಜಾರರವರನ್ನು ಕೆವಿಜಿ ಬ್ಯಾಂಕ್ ನ ಧಾರವಾಡ ಪ್ರಧಾನ ಕಚೇರಿಗೆ ಮುಂದುವರಿಕೆಯ ಸೇವೆಗೆ ವರ್ಗಾವಣೆ ಆದೇಶ ಬಂದಿದ್ದು ಆದರೆ ಬ್ಯಾಂಕನ ಸ್ಥಳೀಯ ಗ್ರಾಹಕರು ಅರವಿಂದ ಪೂಜಾರವರ ಸೇವೆ ವಜ್ರಳ್ಳಿಯಲ್ಲಿಯೇ‌ ಮುಂದುವರಿಯಲಿ ಎಂದು ಕೆವಿಜಿ ಬ್ಯಾಂಕ್ ನ ಧಾರವಾಡದ ಪ್ರಧಾನ ಕಚೇರಿಗೆ ಮನವಿಮಾಡಿದ್ದಾರೆ.

    ಶುಕ್ರವಾರ ಬೆಳಿಗ್ಗೆ ವಜ್ರಳ್ಳಿಯ ಕೆವಿಜಿ ಬ್ಯಾಂಕನ ಎದುರಿನಲ್ಲಿ ಸೇರಿದ್ದ ಸಭೆಯಲ್ಲಿ ಸುತ್ತಮುತ್ತ ಹಳ್ಳಿಗಳಿಂದ ಆಗಮಿಸಿದ ಗ್ರಾಹಕರನ್ನು ಉದ್ದೇಶಿಸಿ ಮಾತನಾಡಿದ ವಜ್ರಳ್ಳಿ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ಮತ್ತು ಸಾಮಾಜಿಕ ಕಾರ್ಯಕರ್ತ ಗಜಾನನ ಭಟ್ಟ, ಕಳಚೆ ಮಾತನಾಡಿ ತೀರಾ ಗ್ರಾಮೀಣ ಪ್ರದೇಶದ ಗ್ರಾಹಕರನ್ನು ಹೊಂದಿರುವ ಕೆವಿಜಿ ಬ್ಯಾಂಕನ ವಜ್ರಳ್ಳಿಯ ಶಾಖೆ ಈ ಭಾಗದ ಸಾಮಾಜಿಕ ಆರ್ಥಿಕ ಪ್ರಗತಿಗೆ ಕಾರಣವಾಗಿದ್ದು ಶಾಖಾ ವ್ಯವಸ್ಥಾಪಕ ಅರವಿಂದ ಪೂಜಾರರವರ ಜನಪರವಾದ ನಿಲುವು ಮುಖ್ಯವಾಗಿದೆ.

    ತೀರಾ ಹಳ್ಳಿಯ ಪ್ರದೇಶದ ಗ್ರಾಹಕರನ್ನೇ ಹೆಚ್ಚುಹೊಂದಿರುವ ಕಾರಣ ಇದುವರೆಗೆ ಸೇವೆ ಸಲ್ಲಿಸುತ್ತಿರುವ ಅರವಿಂದ ಪೂಜಾರರು ಎಲ್ಲಾ ಗ್ರಾಹಕರ ಬದುಕಿನ ಸಂಪೂರ್ಣ ಪರಿಚಯ ಹೊಂದಿದವರಾಗಿದ್ದು ಪ್ರಾಮಾಣಿಕವಾದ ಸೇವೆ ಮಾಡುವುದರೊಂದಿಗೆ ಗ್ರಾಹಕರ ಜೊತೆ ಒಳ್ಳೆಯ ಬಾಂಧವ್ಯವನ್ನು ಹೊಂದಿದ್ದು ಬ್ಯಾಂಕ್ ನ ಆರ್ಥಿಕ ಬಲವರ್ಧನೆ ಗೆ ಕಾರಣರಾಗಿದ್ದಾರೆ. ಜನರ ಜೀವನಮಟ್ಟ ಸುಧಾರಿಸುವಲ್ಲಿ ಅವರ ಪಾತ್ರ ಹಿರಿದಾಗಿದೆ. ಆದರೆ ಅವರು ವರ್ಗಾವಣೆಗೊಂಡರೆ ಈ ಭಾಗದ ಗ್ರಾಹಕರಿಗೆ ಸಂವಹನ ದೃಷ್ಟಿಯಿಂದ, ಅನಾನುಕೂಲತೆಯಾಗಲಿದೆ. ಗ್ರಾಹಕರಿಗೆ ಉತ್ತಮ ಸೇವೆಯ ಮುಂದುವರಿಕೆಯ ಭಾಗವಾಗಿ ಅರವಿಂದ ಪೂಜಾರರ ಸೇವೆಯನ್ನು ವಜ್ರಳ್ಳಿಯಲ್ಲಿಯೇ ಮುಂದುವರಿಸಬೇಕಾಗಿ ಗ್ರಾಹಕರ ಪರವಾಗಿ ಅವರು ಕೋರಿದರು.

    300x250 AD

    ಈ ಸಂದರ್ಭದಲ್ಲಿಗ್ರಾಮ ಪಂಚಾಯತ ಸದಸ್ಯ ಭಗೀರಥ ನಾಯ್ಕ,ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕನ ಸ್ಥಳೀಯ ಗ್ರಾಹಕರಾದ ತಿಮ್ಮಣ್ಣ ಕೋಮಾರ, ಮಂಜು ಮರಾಠಿ,ಗಿರೀಶ ಹೆಗಡೆ,ರಾಮಕೃಷ್ಣ ಭಟ್ ಬೆಣ್ಣೆಜಡ್ಡಿ , ಎ.ಸಿ ಗಾಂವ್ಕಾರ, ರಾಮಾ ಖಂಡೇಕರ್.ಶಂಕರ ಗೌಡ ಬೀಗಾರ, ತಮ್ಮಣ್ಣ ಗಾಮದ ಪರಮೇಶ್ವರ ಗಾಂವ್ಕಾರ ಶಳೆಮನೆ, ರಾಘವೇಂದ್ರ ಹೆಬ್ಬಾರ ಮಲವಳ್ಳಿ, ಮುಂತಾದವರು ಸ್ಥಳದಲ್ಲಿದ್ದು ವ್ಯವಸ್ಥಾಪಕರ ಸೇವೆಯನ್ನು ವಜ್ರಳ್ಳಿಯಲ್ಲಿ ಮುಂದುವರಿಯಲು ಒತ್ತಾಯಿಸಿ ಪ್ರಧಾನ ಕಚೇರಿಯ ಮುಖ್ಯಸ್ಥರಿಗೆ ಮನವಿ ಸಲ್ಲಿಸಿದರು..

    Share This
    300x250 AD
    300x250 AD
    300x250 AD
    Leaderboard Ad
    Back to top