ದಾಂಡೇಲಿ: ದಾಂಡೇಲಿ- ಹಳಿಯಾಳ ರಾಜ್ಯ ಹೆದ್ದಾರಿಯಲ್ಲಿ ಬರುವ ತಾಟಗೇರಾ ಕ್ರಾಸ್ ಹತ್ತಿರ ದಾಂಡೇಲಿಯಿಂದ ಅಳ್ನಾವರಕ್ಕೆ ನೀರು ಕೊಂಡೊಯ್ಯಲಾಗುವ ಪೈಪಿನಿಂದ ನೀರು ಕಾರಂಜಿಯ ರೂಪದಲ್ಲಿ ಚಿಮ್ಮಲಾರಂಭಿಸಿದೆ.
ಈಗಾಗಲೆ ಪ್ರಾಯೋಗಿಕವಾಗಿ ನೀರು ಪೂರೈಕೆ ಆರಂಭವಾಗಿದ್ದು, ಅದರ ನಡುವೆ ಅಲ್ಲಲ್ಲಿ ಇಂಥ ಘಟನೆಗಳು ನಡೆಯುವಂತಾಗಿದೆ. ಸಾಕಷ್ಟು ಪ್ರಮಾಣದಲ್ಲಿ ನೀರು ಪೋಲಾಗುತ್ತಿದ್ದು, ಕಾಮಗಾರಿ ಗುತ್ತಿಗೆ ಸಂಸ್ಥೆಯ ಕೆಲಸದ ಬದ್ದತೆಯನ್ನು ಪ್ರಶ್ನಿಸುವ ರೀತಿಯಲ್ಲಿ ನೀರು ಚಿಮ್ಮತೊಡಗಿದ್ದು ಸಂಬಂಧಪಟ್ಟವರು ಕೂಡಲೆ ಗಮನ ಹರಿಸಬೇಕಾಗಿದೆ.