ಅಂಕೋಲಾ: ತಾಲೂಕು ಹಾಲಕ್ಕಿ ಒಕ್ಕಲಿಗರ ಸಂಘದ ವತಿಯಿಂದ ಪ್ರಥಮ ವರ್ಷದ ಹಾಲಕ್ಕಿ ಜಾನಪದ ಹಬ್ಬವನ್ನು ಆಚರಿಸಲಿದ್ದು, ಏಪ್ರಿಲ್ 23ರಂದು ರಾತ್ರಿ 8.30ಕ್ಕೆ ವಿವಿಧ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ. ಸಂಘದ ವತಿಯಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತುಳಸಿ ಗೌಡ ಅವರ ಮನೆಗೆ ಭೇಟಿ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮಂಗು ಬಿ. ಗೌಡ, ಉಪಾಧ್ಯಕ್ಷ ಲಂಬೋದರ ಗೌಡ, ಕಾರ್ಯದರ್ಶಿ ರಾಜು ಗೌಡ, ಪದಾಧಿಕಾರಿಗಳಾದ ಪ್ರಕಾಶ ಗೌಡ, ಶೇಖರ ಗೌಡ ಇತರರಿದ್ದು ಕಾರ್ಯಕ್ರಮಕ್ಕೆ ತುಳಸಿ ಗೌಡ ಅವರಿಗೆ ಆಮಂತ್ರಣ ಪತ್ರಿಕೆ ನೀಡುವ ಮೂಲಕ ಆಹ್ವಾನಿಸಿದರು.
ಏ.23ರಂದು ತಾಲೂಕಿನ ಅಂಬಾರಕೊಡ್ಲದ ಗದ್ದುಗೆ ಆವರಣದ ವೇದಿಕೆಯಲ್ಲಿ ಪ್ರಥಮ ವರ್ಷದ ಹಾಲಕ್ಕಿ ಜಾನಪದ ಹಬ್ಬದಲ್ಲಿ ಸಮಾಜದವರಿಗಾಗಿ ಗುಮಟೆ ವಾದನ, ಹಗರಣ, ಕುಣಿತ ಸ್ಪರ್ಧೆಗಳು ನಡೆಯಲಿದೆ.
ಆಸಕ್ತರು ಹೆಸರು ನೋಂದಾಯಿಸಿಕೊಳ್ಳುವಂತೆ ರಾಜು ಗೌಡ (ಮೊ.ಸಂ: 89711 26903), ಪ್ರಕಾಶ ಗೌಡ (ಮೊ.ಸಂ: 97407 52402), ಶೇಖರ ಗೌಡ (ಮೊ.ಸಂ: 98440 54220) ವಿನಂತಿಸಿದ್ದಾರೆ.