ದಾಂಡೇಲಿ: ಹಳೆದಾಂಡೇಲಿಯ ಮುಖ್ಯ ರಸ್ತೆಯಲ್ಲಿ ಇರುವ ಮನಿಯಾರ್ ಅವರ ಮನೆಯ ಆವರಣದಲ್ಲಿ ನಾಗರ ಹಾವು ಪ್ರತ್ಯಕ್ಷವಾಗಿತ್ತು. ನಾಗರ ಹಾವನ್ನು ನೋಡಿ ಭಯಗೊಂಡ ಜನ ಕೂಡಲೆ ನಗರದ ಉರಗಪ್ರೇಮಿ ರಜಾಕ್ ಶಾ ಅವರನ್ನು ಸ್ಥಳಕ್ಕೆ ಕರೆಸಿಕೊಂಡರು. ಮೂಲೆಯಲ್ಲಿ ಅವಿತು ಕುಳಿತಿದ್ದ ನಾಗರ ಹಾವನ್ನು ಸುರಕ್ಷಿತವಾಗಿ ಹಿಡಿದು ರಜಾಕ್ ಶಾ ಅವರು ಮರಳಿ ಕಾಡಿಗೆ ಬಿಟ್ಟು ಬರುವುದರ ಮೂಲಕ ವನ್ಯಕಾಳಜಿಯನ್ನು ಮೆರೆದಿದ್ದಾರೆ.
ನಗರ ಹಾಗೂ ನಗರದ ಸುತ್ತಮುತ್ತಲೂ ಸಾವಿರಕ್ಕೂ ಅಧಿಕ ಹಾವುಗಳನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟು ಬರುತ್ತಿರುವ ರಜಾಕ್ ಶಾ ಅವರ ಈ ಕಾರ್ಯಕ್ಕೆ ಸಾಕಷ್ಟು ಸನ್ಮಾನಗಳು, ಗೌರವಗಳು ಅವರನ್ನು ಅರಸಿ ಬಂದಿವೆ. ಹಾವುಗಳ ಬಗ್ಗೆ ವಿಶೇಷ ಕಾಳಜಿಯನ್ನಿಟ್ಟುಕೊಂಡಿರುವ ರಜಾಕ್ ಶಾ ಅವರು ಅದೆಷ್ಟೋ ಗಾಯಗೊಂಡ ಹಾವುಗಳನ್ನು, ಪ್ರಾಣಿ- ಪಕ್ಷಿಗಳನ್ನು ಆರೈಕೆ ಮಾಡಿ ವನ್ಯಸಂಕುಲಗಳ ಸಂರಕ್ಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.