ಕುಮಟಾ:ಉದ್ಯೋಗ ಮಾಡುವ ಮಹಿಳೆಯರಿಗೆ ನಮ್ಮ ಕೈಲಾಗುವ ಸಹಾಯ ಮಾಡಲಾಗುವುದು ಎಂದು ಸುಲಭ ಸಂಸ್ಥೆಯ ಮುಖ್ಯಸ್ಥ ದಿವಾಕರ ಅಘನಾಶಿನಿ ಹೇಳಿದರು.
ಸುಲಭ ಸೇವಾ ಸಂಸ್ಥೆ ಅಡಿಯಲ್ಲಿ ರಚನೆಯಾದ ದಿವಗಿಯ ಮೀನುಗಾರ ಮಹಿಳೆಯರ ಸ್ವ ಸಹಾಯ ಸಂಘಕ್ಕೆ ಸಾಲದ ಕುರಿತು ಮಾಹಿತಿಗಳನ್ನು ವಿವರಿಸುತ್ತಾ ಮಾತನಾಡಿದರು. ಸುಲಭ ಸೌಹಾರ್ದ ಕ್ರೆಡಿಟ್ ಸಹಕಾರಿ ನಿಯಮಿತ ವತಿಯಿಂದ ಸಾಲ ಸೌಲಭ್ಯ ಒದಗಿಸಲಾಯಿತು.
ಈ ಸಂದರ್ಭದಲ್ಲಿ ಸುಲಭ ಸೌಹಾರ್ದ ಕ್ರೆಡಿಟ್ ಸಹಕಾರಿ ನಿಯಮಿತ ವ್ಯವಸ್ಥಾಪಕಿ ಪ್ರೀತಿ ಗೌಡ,ಸಾಲ ಮರುಪಾವತಿಯ ಮಹತ್ವವನ್ನು ಮಹಿಳೆಯರಿಗೆ ಮನವರಿಕೆ ಮಾಡಿಕೊಟ್ಟರು.ಸುಲಭ ಸಹಾಯಕಿ ವಿದ್ಯಾ ಭಂಡಾರಿ,ಚೇತನ ಆಚಾರಿ,ಗೀತಾ ಗೌಡ ಮುಂತಾದವರು ಉಪಸ್ಥಿತರಿದ್ದರು.