• Slide
    Slide
    Slide
    previous arrow
    next arrow
  • ಯಶಸ್ವಿಯಾಗಿ ನಡೆದ ಜಿಲ್ಲಾ ಮಟ್ಟದ ಹಾರ್ಡ ಟೆನಿಸ್ ಕ್ರಿಕೆಟ್ ಪಂದ್ಯಾವಳಿ

    300x250 AD

    ಶಿರಸಿ :ನಾಮಧಾರಿ, ಬಿಲ್ಲವ, ಆರ್ಯ, ಈಡಿಗ ಸಮಾಜದ ಯುವಕರಿಗಾಗಿ ಜಿಲ್ಲಾ ಮಟ್ಟದ ಹಾರ್ಡ ಟೆನಿಸ್ ಕ್ರಿಕೆಟ್ ಪಂದ್ಯಾವಳಿಯು ಶಿರಸಿಯ ಗಾಂಧಿನಗರದ, ಪ್ರೋಗ್ರೆಸ್ಸಿವ ಮೈದಾನದಲ್ಲಿ ನಡೆದಿದ್ದು ಎರಡು ದಿನಗಳ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನವನ್ನು ಶಿರಸಿಯ ‘ಶಿರಸಿ ರೋರ್ಕಸ್’ ತಂಡ ಗಳಿಸಿದೆ. ಪ್ರಥಮ ಸ್ಥಾನ ಪಡೆದ ತಂಡ ರೂ.30000 ವನ್ನು ಬಹುಮಾನವಾಗಿ ಪಡೆದಿದ್ದು ಮತ್ತು ದ್ವಿತೀಯ ಬಹುಮಾನ ರೂ.20000 ಗಳನ್ನು ‘ಎಸ್.ಪಿ.ಎಚ್. ಹೊಳೆಗದ್ದೆ’ ತಂಡವು ತನ್ನದಾಗಿಸಿಕೊಂಡಿದೆ.

    ಈ ಪಂದ್ಯಾವಳಿಯಲ್ಲಿ ಜಿಲ್ಲೆಯ 12 ತಂಡಗಳು ಭಾಗವಹಿಸಿದಲ್ಲದೇ, ಸಮಾಜದ ಹೆಸರಾಂತ ಆಟಗಾರರು ಭಾಗವಹಿಸಿದ್ದರು. ಮೊದಲ ದಿನ ಮಧು ಬಂಗಾರಪ್ಪರವರು ಸಮಾಜ ಬಾಂಧವರ ಕ್ರಿಕೆಟ್ ವಿಕ್ಷಣೆಗೆ ತಮ್ಮ ಅಮೂಲ್ಯ ಸಮಯ ನಿಗದಿಪಡಿಸಿ, ಸ್ವಲ್ಪ ಸಮಯ ಪಂದ್ಯ ವೀಕ್ಷಿಸಿದರು. ಈ ಸಂಧರ್ಭದಲ್ಲಿ ಅವರನ್ನು ಹಾಗೂ ಯುವ ಮುಖಂಡ ಅಶ್ವಿನ್ ಭೀಮಣ್ಣ ನಾಯ್ಕರವರನ್ನು ಕ್ರೀಡಾ ಸಮಿತಿಯ ಪರವಾಗಿ ಸನ್ಮಾನಿಸಲಾಯಿತು.

    ಈ ಪಂದ್ಯಾವಳಿಯ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಶಿರಸಿ ಪೋಲಿಸ್ ಇಲಾಖೆಯ ಡಿವೈಎಸ್‍ಪಿ, ರವಿ ಡಿ. ನಾಯ್ಕ, ಸ್ಕೋಡ್‍ವೇಸ್ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ ನಾಯ್ಕ, ಶಿರಸಿ ತಾಲೂಕಾ ಆರ್ಯ ಈಡಿಗ (ನಾಮಧಾರಿ-ಬಿಲ್ಲವ) ಸಮಾಜ ಅಭಿವೃದ್ಧಿ ಸಂಘ ನಗರ ಘಟಕ ಅಧ್ಯಕ್ಷ ಗಣಪತಿ ನಾಯ್ಕ, ದೇವಿಕೆರೆ, ಶಿರಸಿ ತಾಲೂಕಾ ಆರ್ಯ ಈಡಿಗ ಅಭಿವೃದ್ಧಿ ಸಂಘ,ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ಮಾರಿಕಾಂಬಾ ನಗರ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ಸುಭಾಷ್ ನಾಯ್ಕ, ನಾಗಭೂಷಣ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು ಹಾಗೂ ಸಮಾಜದ ಗಣ್ಯರು, ಹಿರಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಶಿರಸಿಯಿಂದ ನವಜಾತ ಶಿಶುವನ್ನು ಕೇವಲ 4 ಘಂಟೆ 43 ನಿಮಿಷಕ್ಕೆ ಬೆಂಗಳೂರಿನ ಆಸ್ಪತ್ರೆಗೆ ತಲುಪಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಅಂಬುಲೆನ್ಸ್ ಡೈವರ್ ಸುದರ್ಶನ ನಾಯ್ಕ, ಹಾಗೂ ಜಿಲ್ಲೆಯ ಹೆಸರಾಂತ ಕ್ರಿಕೆಟಿಗ ಕಾನಸೂರಿನ ಸುಭಾಷ ನಾಯ್ಕ ಇವರ ಕ್ರೀಡಾ ಸಾಧನೆಗೂ ಎಲ್ಲರ ಸಮ್ಮುಖದಲ್ಲಿ ಆಯೋಜಕರ ವತಿಯಿಂದ ಸನ್ಮಾನಿಸಲಾಯಿತು.

    300x250 AD


    ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಡಿವೈಎಸ್‍ಪಿ ರವಿ ಡಿ. ನಾಯ್ಕ, ಇವರು ಇಂದಿನ ಯುವಪೀಳಿಗೆ ಮೊಬೈಲ್ ಗೀಳನ್ನು ಬಿಟ್ಟು ಮೈದಾನದಲ್ಲಿನ ಕ್ರೀಡಾ ಚಟುವಟುಕೆಯಲ್ಲಿ ಭಾಗವಹಿಸಬೇಕೆಂದರು. ವೆಂಕಟೇಶ ನಾಯ್ಕ ಮಾತನಾಡಿ ಸಮಾಜ ಸಂಘಟನೆಗೆ ಕ್ರೀಡೆಯು ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ಸನ್ಮಾನಿತ ಸುಭಾಷ ನಾಯ್ಕ ಮಾತನಾಡಿ ಕ್ರೀಡೆ ಮನಸ್ಸು ಮತ್ತು ಶರೀರದ ಸಮತೋಲನವನ್ನು ಕಾಪಾಡುವುದರ ಜೊತೆಗೆ ಜೀವನ ಶೈಲಿಯನ್ನು ರೂಢಿಸುತ್ತದೆ ಎಂದರು.
    ಸಂಘಟಕರ ಪರವಾಗಿ ಪಾಂಡು ನಾಯ್ಕ, ರಾಘವೇಂದ್ರ ನಾಯ್ಕ, ಸತೀಶ ನಾಯ್ಕ, ಔಡಾಳ, ಅನಿಲ ನಾಯ್ಕ, ಶಶಿ ನಾಯ್ಕ, ಮನೀಶ ನಾಯ್ಕ, ಮಂಜುನಾಥ ನಾಯ್ಕ, ಸಂಜು ನಾಯ್ಕ, ರವಿ ನಾಯ್ಕ, ಅರುಣ ನಾಯ್ಕ, ಯತೀನ ನಾಯ್ಕ, ಸಂದೇಶ ನಾಯ್ಕ ಇತರರು ಇದ್ದರು.
    ಕಾರ್ಯಕ್ರಮವನ್ನು ಕಿರಣ ಡಿ. ನಾಯ್ಕ ನಡೆಸಿಕೊಟ್ಟರು.

    Share This
    300x250 AD
    300x250 AD
    300x250 AD
    Leaderboard Ad
    Back to top