ಮುಂಡಗೋಡ: ಲೋಕಕಲ್ಯಾಣಾರ್ಥವಾಗಿ ಪಟ್ಟಣದ ಶ್ರೀ ಮಾರಿಕಾಂಬಾ ದೇವಾಲಯದಲ್ಲಿ ಹಮ್ಮಿಕೊಂಡ ” ಶತಚಂಡಿ ಮಹಾಯಾಗ ” ಧಾರ್ಮಿಕ ಕಾರ್ಯಕ್ರಮದಲ್ಲಿ ಮಾನ್ಯ ಕಾರ್ಮಿಕ ಖಾತೆ ಸಚಿವರಾದ ಶ್ರೀ ಶಿವರಾಮ ಹೆಬ್ಬಾರ್ ಅವರು ಪಾಲ್ಗೊಂಡರು.
ಈ ವೇಳೆ ಮಾತನಾಡಿದ ಸಚಿವರು ಹೋಮ, ಹವನಗಳಂತಹ ಧಾರ್ಮಿಕ ಕಾರ್ಯಕ್ರಮಗಳಿಂದ ಭಕ್ತರಲ್ಲಿ ಕೆಟ್ಟ ಹವ್ಯಾಸಗಳು, ಋಣಾತ್ಮಕ ಚಿಂತನೆಗಳು ದೂರವಾಗಿ ಉತ್ತಮ ಸಂಸ್ಕಾರ, ಜ್ಞಾನ ಬೆಳೆಯುತ್ತದೆ.ಈ ಶತಚಂಡಿ ಮಹಾಯಾಗದಿಂದ ನಾಡಿನ ಸಂಕಷ್ಟಗಳು ದೂರವಾಗಿ ಸರ್ವರಿಗೂ ಒಳಿತಾಗಲಿ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ಶ್ರೀ ಎಲ್.ಟಿ.ಪಾಟೀಲ್,ಮಂಡಲಾಧ್ಯಕ್ಷರಾದ ಶ್ರೀ ನಾಗಭೂಷಣ ಹಾವಣಗಿ, ಪ.ಪಂ ಅಧ್ಯಕ್ಷರಾದ ಶ್ರೀಮತಿ ರೇಣುಕಾ ಹಾವೇರಿ, ಪ್ರಮುಖರಾದ ಶ್ರೀ ಉಮೇಶ್ ಬಿಜಾಪುರ, ಶ್ರೀ ಗುಡ್ಡಪ್ಪ ಕಾತೂರ, ಶ್ರೀ ರವಿ ಹಾವೇರಿ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.