ಕಾರವಾರ: ತಾಲೂಕಿನ ಘೋಟೆಭಾಗದಲ್ಲಿ ಯುವಕನೋರ್ವ ನಾಟಕ ನೋಡಲು ತೆರಳಿದ್ದ ವೇಳೆ ಹಿಂಬದಿಯಿಂದ ಕಬ್ಬಿಣದ ರಾಡ್ ನಿಂದ ಹೊಡೆದು ಹಲ್ಲೆ ನಡೆಸಿದ ಘಟನೆ ನಡೆದಿದೆ.
ಮಾಜಾಳಿಯ ಮದನ ನಾಯ್ಕ್ ಎಂಬಾತನೇ ಹಲ್ಲೆಗೊಳಗಾದ ಯುವಕನಾಗಿದ್ದು ಹಳೆ ವೈಷಮ್ಯದ ಕಾರಣಕ್ಕೆ ದಿನೇಶ್ ಮುಳೆಕರ್ ಎಂಬಾತ ನನ್ನ ತಮ್ಮ ರೈಲ್ವೆ ಹಳಿಗೆ ತಲೆಕೊಟ್ಟು ಸಾಯಲು ನೀನೆ ಕಾರಣ ಎಂದು ಹಿಂಬದಿಯಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.
ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು ಈ ಕುರಿತು ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.