ಶಿರಸಿ: ಫೋರಂ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಕಪ್ (ಎಫ್.ಸಿ.ಸಿ.ಇ) ಸೀಸನ್ 3,ಏ.17 ರವಿವಾರ ಧಾರವಾಡದಲ್ಲಿ ನಡೆದಿದ್ದು ಶಿರಸಿ ಇಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್ ತಂಡವು ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಿದೆ.
ಧಾರವಾಡದ ಅಗ್ರಿ ಯುನಿವರ್ಸಿಟಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿಯನ್ನು ಪ್ರವೀಣ್ ನಾಯಕ್ ನಾಯಕತ್ವದಲ್ಲಿ ಗೆದ್ದು ಚಾಂಪಿಯನ್ ಆಗಿ ಹೊರ ಹೊಮ್ಮಿ ಕಪ್ಪನ್ನು ಎತ್ತಿಹಿಡಿದಿದೆ.
ಮೊದಲ ಪಂದ್ಯದಲ್ಲಿ ಗದಗ ತಂಡವನ್ನು ನಂತರ ಹುಬ್ಬಳ್ಳಿ ‘ಎ’ ತಂಡವನ್ನು ಸೋಲಿಸಿ ನಂತರ ಸೆಮಿಫೈನಲ್ನಲ್ಲಿ ಧಾರವಾಡ ‘ಎ’ ತಂಡವನ್ನು ಸೋಲಿಸಿ ಫೈನಲ್ ಗೆ ಅರ್ಹತೆ ಪಡೆಯಿತು.
ಫೈನಲ್ ನಲ್ಲಿ ಧಾರವಾಡದ ಎಫ್.ಸಿ.ಸಿ.ಇ. ‘ಬಿ’ ತಂಡವನ್ನು 54 ರನ್ನಿಂದ ಸೋಲಿಸಿ ಕಪ್ ನ್ನು ತನ್ನದಾಗಿಸಿಕೊಂಡಿತು.
ಸರಣಿಶ್ರೇಷ್ಠ ಹಾಗೂ ಬೆಸ್ಟ್ ಬ್ಯಾಟ್ಸ್ ಮನ್ ಆಗಿ ಶಿರಸಿಯ ನವೀನ್ ಶೇಟ್, ಬೆಸ್ಟ್ ಬೌಲರ್ ಆಗಿ ಸಚಿನ್ ಹೆಗಡೆ ಪ್ರಶಸ್ತಿ ಪಡೆದರು.
ಭಾನುಪ್ರಕಾಶ್, ಚಂದನ್ ಶೆಟ್,ಆನಂದ್ ಆಚಾರ್ಯ, ಪುರುಷೋತ್ತಮ್ ಪೂಜಾರಿ ಹಾಗೂ ಪ್ರಶಾಂತ್ ಇವರ ಅತ್ಯುತ್ತಮ ಆಟವು ಪ್ರಶಸ್ತಿ ಬರುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
ತಂಡದಲ್ಲಿ ಶಾಮಸುಂದರ್ ಎಂ ಭಟ್, ಚಂದನ ಪೈ,ಎಲ್.ಆರ್ ಹೆಗಡೆ, ರಾಜೇಶ್ ಕುಬ್ಸದ್ ರಮೇಶ್ ಬಿ. ಇದ್ದರು