ಶಿರಸಿ: ತಾಲೂಕಿನ ಮುಂಡಿಗೇಸರದ ಅರಸು ಎಂದೇ ಹೆಸರಾಗಿದ್ದ ರಾಮಚಂದ್ರ ಸುಬ್ರಾಯ ಹೆಗಡೆ (80) ವಯೋ ಸಹಜ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧರಾದರು. ಮೃತರು ಪತ್ನಿ, ಈರ್ವರು ಗಂಡು ಮಕ್ಕಳು ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.
ಸ್ನೇಹಜೀವಿಯಾಗಿದ್ದ ಆರೆಸ್ಸು ಎಂದೂ ಕರೆಸಿಕೊಳ್ಳುತ್ತಿದ್ದ ರಾಮಣ್ಣ ಮುಂಡಿಗೇಸರದ ದೇವಸ್ಥಾನದ ಕಲ್ಯಾಣ ಮಂಟಪದ ಸಂಸ್ಥಾಪಕರು. ಗೋಳಿಕಟ್ಟಾ ಹಣ್ಣು ಸಂಸ್ಕರಣ ಸಂಘದ ಪ್ಲಾಟುದಾರರಿಗೆ ಕಾನೂನು ರೀತ್ಯ ರಕ್ಷಣೆ ಒದಗಿಸಿಕೊಟ್ಟಿದ್ದರು. ಸಹಕಾರಿ ಮನೋಭಾವದ ರಾಮಚಂದ್ರ ಹೆಗಡೆ ಮುಂಡಿಗೇಸರ ಯುವಕ ಸಂಘದ ಸಂಸ್ಥಾಪಕರಾಗಿದ್ದರು. ಮಾಜಿ ಸಚಿವರಾಗಿದ್ದ ಪಿ.ಎಸ್.ಜೈವಂತ ಅವರ ನಿಕಟವರ್ತಿಗಳಾಗಿದ್ದರು. ಮೃತರು ನೇತ್ರದಾನಿ ಕೂಡ ಆಗಿದ್ದಾರೆ.
ಮೃತರ ಪುತ್ರರಲ್ಲಿ ಓರ್ವರು ಗೋಳಿಕಟ್ಟ ಕಾಮಧೇನು ಸೊಸೈಟಿ ಅಧ್ಯಕ್ಷ ವಿನಾಯಕ ಹೆಗಡೆ, ಇನ್ನೊಬ್ಬರು ಇಂಜನೀಯರ್ಸ ಅಸೋಸಿಯೇಶನ್ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಹೆಗಡೆ ಎಂಬುದು ಉಲ್ಲೇಖನೀಯ.