ಹೊನ್ನಾವರ: ಇಂದಿನ ಆಧುನಿಕ ಯುಗದಲ್ಲಿ ಕುಟುಂಬದ ಒಬ್ಬರ ದುಡಿಮೆಯಿಂದ ಸಂಸಾರ ಸಾಗಿಸುವುದು ತುಂಬಾ ಕಷ್ಟಕರವಾಗಿದ್ದು, ಮಹಿಳೆಯರು ಮನೆಗೆಲಸದ ಜೊತೆಗೆ ಮನೆಯಲ್ಲಿಯೇ ಸ್ವ ಉದ್ಯೋಗದಲ್ಲಿ ತೊಡಗಿಕೊಂಡು ಸ್ವಾವಲಂಬಿ ಬದುಕು ಸಾಗಿಸಲು ನೆರವಾಗಲಿ ಎನ್ನುವ ದೃಷ್ಟಿಯಿಂದ ಕಳೆದ ಆರು ತಿಂಗಳ ಹಿಂದೆ ಹೊಲಿಗೆ ತರಬೇತಿ ಕೇಂದ್ರವನ್ನು ತೆರೆದು ತರಬೇತಿ ನೀಡುವ ಕಾರ್ಯ ಲಯನ್ಸ್ ಕ್ಲಬ್ ಮಾಡಿದೆ. ಇದರ ಪ್ರಯೋಜನವನ್ನು 30 ಮಹಿಳೆಯರು ಪಡೆದಿರುವುದು ತುಂಬಾ ಸಂತಸದ ವಿಚಾರವಾಗಿದೆ. ಈ ಭಾಗದ ಎಲ್ಲ ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ನೆರವಾಗಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ವಿನೋದ ನಾಯ್ಕ ಹೇಳಿದರು.
ತಾಲೂಕಿನ ಸರಳಗಿ ದೇವರಗದ್ದೆಯಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಪ್ರಾರಂಭಿಸಿದ ಹೊಲಿಗೆ ತರಬೇತಿ ಕೇಂದ್ರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲಯನ್ಸ್ ಕ್ಲಬ್ ಖಜಾಂಚಿ ಎಸ್.ಜೆ.ಕೈರನ್ನ ಪ್ರಾಸ್ತಾವಿಕವಾಗಿ ಮಾತನಾಡಿ, ಲಯನ್ಸ್ ಕಾರ್ಯವೈಖರಿ ಬಗ್ಗೆ ಮಾಹಿತಿ ನೀಡಿದರು. ಕಾರ್ಯದರ್ಶಿ ಉದಯ ನಾಯ್ಕ ಸ್ವಾಗತಿಸಿದರು. ಎಮ್.ಜಿ.ನಾಯ್ಕ ನಿರೂಪಿಸಿದರು. ಎನ್.ಜಿ.ಭಟ್ ವಂದಿಸಿದರು. ವೇದಿಕೆಯಲ್ಲಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷ ಪ್ರಭಾಕರ ಭಂಡಾರಿ, ತರಬೇತಿ ಶಿಕ್ಷಕಿ ಭಾರತಿ ನಾಯ್ಕ ಉಪಸ್ಥಿತರಿದ್ದರು.