ದಾಂಡೇಲಿ: ನಗರದ ಗಾಂಧಿನಗರದಲ್ಲಿರುವ ಶ್ರೀವಿಘ್ನೇಶ್ವರ ಮಾರುತಿ ಮಂದಿರದಲ್ಲಿ ಅಂಗಾರಕ ಸಂಕಷ್ಟಿ ನಿಮಿತ್ತ ಮಂಗಳವಾರ ಬೆಳಗ್ಗಿನಿಂದಲೆ ವಿಶೇಷ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಅಂಗಾರಕ ಸಂಕಷ್ಟಿಯಂದು ಬೆಣ್ಣೆಯಿಂದ ಗಣಪನನ್ನು ಅಲಂಕರಗೊಳಿಸುತ್ತಿರುವುದು ಇಲ್ಲಿಯ ವಿಶೇಷ. ದೇವಸ್ಥಾನದ ಪ್ರಧಾನ ಅರ್ಚಕ ಚೇತನ್ ಭಟ್ ಅವರ ನೇತೃತ್ವದಲ್ಲಿ ಶ್ರೀವಿಘ್ನೇಶ್ವರನಿಗೆ ಬೆಣ್ಣೆ ಅಲಂಕಾರ ಮಾಡಲಾಗಿದ್ದು, ವಿಶೇಷ ಪೂಜೆ ಮತ್ತು ಗಣಹೋಮ ಪೂಜೆಯನ್ನು ಹಮ್ಮಿಕೊಳ್ಳಲಾಯಿತು. ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಶ್ರೀಸ್ವಾಮಿಯ ದರ್ಶನವನ್ನು ಪಡೆದುಕೊಂಡರು.