ಸಿದ್ದಾಪುರ; ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ನೂತನ ಅಧ್ಯಕ್ಷರಾಗಿ ನಾಗರಾಜ ನಾಯ್ಕ ಮಾಳ್ಕೋಡು, ಉಪಾಧ್ಯಕ್ಷರಾಗಿ ಶ್ರೀಧರ ಗಜಾನನ ಹೆಗಡೆ ಮದ್ದಿನಕೇರಿ ಅವಿರೋಧವಾಗಿ ಆಯ್ಕೆ ಆಗಿದ್ದು ಕಾರ್ಯದರ್ಶಿಯಾಗಿ ರಮೇಶ ಹೆಗಡೆ ಹಾರ್ಸಿಮನೆ ಪುನರಾಯ್ಕೆ ಆಗಿದ್ದಾರೆ.
ಪಟ್ಟಣದಲ್ಲಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ ಭಟ್ಟ ಹೊಸೂರು ಅವರ ಅಧ್ಯಕ್ಷತೆಯಲ್ಲಿ ಬುಧವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಜಿಲ್ಲಾ ಸಂಘದ ಉಪಾಧ್ಯಕ್ಷ ನಾಗರಾಜ ಭಟ್ಟ ಕೆಕ್ಕಾರ, ಸದಸ್ಯ ಶಿವಶಂಕರ ಕೋಲಸಿರ್ಸಿ, ತಾಲೂಕು ಸಂಘದ ಪದಾಧಿಕಾರಿಗಳಾದ ಗಂಗಾಧರ ಕೊಳಗಿ, ಸುರೇಶ ಮಡಿವಾಳ ಕಡಕೇರಿ, ಪತ್ರಕರ್ತರಾದ ಸುಜಯ್ ಪಿ.ಭಟ್ಟ ಮುತ್ತಿಗೆ, ದಿವಾಕರ ನಾಯ್ಕ ಸಂಪಖಂಡ ಉಪಸ್ಥಿತರಿದ್ದರು.