ಸಿದ್ದಾಪುರ;ತಾಲೂಕಿನ ಹಾರ್ಸಿಕಟ್ಟಾ ಸಮೀಪದ ವಡಗೇರೆಯಲ್ಲಿ ಲಕ್ಷ್ಮೀನಾರಾಯಣ ಯಕ್ಷಗಾನ ಮಂಡಳಿ ಹೆಮ್ಮನಬೈಲ್ ಹಾಗೂ ಅತಿಥಿ ಕಲಾವಿದರಿಂದ ಏ.21ರಂದು ರಾತ್ರಿ 9.30ರಿಂದ ಮಾರುತಿ ಪ್ರತಾಪ ಹಾಗೂ ಲವ-ಕುಶ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
ಹಿಮ್ಮೇಳದಲ್ಲಿ ಪರಮೇಶ್ವರ ನಾಯ್ಕ ಬ್ರಹ್ಮಾವರ(ಕಾನಗೋಡ), ಮಾಧವ ಭಟ್ಟ ಕೊಳಗಿ,ದರ್ಶನ ಗೌಡ ಮಾರಣಕಟ್ಟೆ, ಗಣಪತಿ ಭಟ್ಟ ಕವಾಳೆ, ಮಂಜುನಾಥ ಗುಡ್ಡೇದಿಂಬ,ವಿಘ್ನೇಶ್ವರ ಗೌಡ ಕೆರಕೊಪ್ಪ, ಗಣೇಶ ಕೆರೆಕೈ. ಮುಮ್ಮೇಳದಲ್ಲಿ ಗಣಪತಿ ನಾಯ್ಕ ಕುಮಟಾ, ಅಶೋಕ ಭಟ್ಟ ಸಿದ್ದಾಪುರ, ಸಂಜಯ ಬಿಳಿಯೂರು, ಷಣುಖ ಗೌಡ ಬಿಳೇಗೋಡು, ಶ್ರೀಧರ ಹೆಗಡೆ ಚಪ್ಪರಮನೆ, ನಾಗೇಂದ್ರ ಭಟ್ಟ ಮರೂರು, ಅವಿನಾಶ ಕೊಪ್ಪ, ಶಂಕರ ಭಟ್ಟ ಸಿದ್ದಾಪುರ,ಕಾರ್ತಿಕ್ ಕಣ್ಣಿ, ಪ್ರಸನ್ನ ದೇವಂಗಿ, ಪ್ರಣವ ಭಟ್ಟ, ಪ್ರದೀಪ ಹಣಜಿಬೈಲ್, ನಂದನ ನಾಯ್ಕ ಅರಶಿನಗೋಡು ಪಾತ್ರನಿರ್ವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಸಂಘಟಕ ಭಾಸ್ಕರ ರಾಮ ಗೌಡ ವಡಗೇರಿ ತಿಳಿಸಿದ್ದಾರೆ.