• Slide
    Slide
    Slide
    previous arrow
    next arrow
  • ಕಲೆಗೆ, ಕಲಾವಿದರಿಗೆ ಪ್ರೋತ್ಸಾಹ ನೀಡಿ ಉತ್ತೇಜಿಸಿ:ಸುಷ್ಮಾ ರಾಜಗೋಪಾಲ

    300x250 AD

    ಶಿರಸಿ: ಕಲೆ ಕಲಿಯೋದು ಕಷ್ಟ. ಕಲೆಗೆ, ಕಲಾವಿದರಿಗೆ ಪ್ರೋತ್ಸಾಹ ನೀಡಿ ಉತ್ತೇಜಿಸಬೇಕಾಗಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಸುಷ್ಮಾ ರಾಜಗೋಪಾಲ ಹೇಳಿದರು.

    ಮಂಗಳವಾರವ ರಾತ್ರಿ ಅವರು ತಾಲೂಕಿನ ಸಹಸ್ರಳ್ಳಿಯ ಮಹಾಸತಿ ದೇವರ ಸಮಾರಾಧನೆ, ಮಹಾಸತಿ ಸೇವಾ ಸಮಿತಿಯ ಹದಿನೆಂಟನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿ ನಮ್ಮ ನಾಡಿನಲ್ಲಿ ಕಲಾವಿದರು ಇದ್ದಾರೆ. ಇಂಥ ಕಲೆ, ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು. ಮಕ್ಕಳ ಪ್ರತಿಭೆಗೆ ತಂದೆ ತಾಯಿಗಳು ಪ್ರೋತ್ಸಾಹ ನೀಡಬೇಕು. ಅವರು ಬೆಳೆದು ಹೆಸರು ತರುತ್ತಾರೆ ಎಂದರು.

    ಪತ್ರಕರ್ತ ಕನ್ನೇಶ ನಾಯ್ಕ ಕೋಲಸಿರ್ಸಿ, ಇಂದು ತಂತ್ರಜ್ಞಾನದ ಸಹಕಾರದಿಂದ ಹಸ್ತದಿಂದಲೇ ಜಗತ್ತು ನೋಡುತ್ತಿದ್ದೆವೆ. ತಂತ್ರಜ್ಞಾನ ಜಗತ್ತು ಒಂದು ಹಳ್ಳಿಯಾಗಿಸಿದೆ. ನಾವು ಸಾಮರಸ್ಯದಿಂದ ಬದುಕಬೇಕು ಎಂದರು.

    ಸುಮಾ ಉಗ್ರಾಣಕರ, ಯಡಹಳ್ಳಿ ಗ್ರಾ.ಪಂ.ಅಧ್ಯಕ್ಷೆ ರಾಜೇಶ್ವರಿ ಗೌಡ, ಉಪಾಧ್ಯಕ್ಷ ರವೀಶ ಹೆಗಡೆ ಮಾಳೆನಳ್ಳಿ, ಸದಸ್ಯೆ ಭಾರತಿ ಹೆಗಡೆ ಹಲಸಿನಳ್ಳಿ, ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ, ಪ್ರಮುಖರಾದ ವಸಂತ ಭಟ್ಟ ಸಹಸ್ರಳ್ಳಿ, ದತ್ತಾತ್ರಯ ಭಟ್ಟ ಸೋಮಸಾಗರ, ಮಾಜಿ ಸೈನಿಕ ರಾಮಚಂದ್ರ ನಾಯ್ಕ, ಡಿ.ಎನ್.ನಾಯ್ಕ, ವೀರಭದ್ರ ನಾಯ್ಕ ಇತರರು ಇದ್ದರು. ಅಧ್ಯಕ್ಷತೆ ವಹಿಸಿದ ಸಮಿತಿ ಅಧ್ಯಕ್ಷ ನಾರಾಯಣ ಎಂ.ಮೊಗೇರ ಮಾತನಾಡಿದರು.

    300x250 AD

    ಬಳಿಕ ನಡೆದ ಕೃಷ್ಣಾರ್ಜುನ ಯಕ್ಷಗಾನದಲ್ಲಿ ಶಂಕರ ಭಟ್ಟ‌ ಬ್ರಹ್ಮೂರು, ಶ್ರೀಪಾದ ಹೆಗಡೆ ಕಂಚಿಮನೆ, ವಿಘ್ನೇಶ್ವರ ಗೌಡ ಕೆಸರಕೊಪ್ಪ ಸಹಕಾರ ನೀಡಿದರು.
    ಅರ್ಜುನನಾಗಿ ಸಂಜಯ ಬಿಳಿಯೂರು, ಕೃಷ್ಣನಾಗಿ ಪ್ರವೀಣ ತಟ್ಟಿಸರ, ದಾರುಕನಾಗಿ ಶ್ರೀಧರ ಚಪ್ಪರಮನೆ, ಸುಭದ್ರೆಯಾಗಿ ಸುಬ್ರಹ್ಮಣ್ಯ ಹೆಗಡೆ‌ ಮುರೂರು, ಭೀಮನಾಗಿ ವೆಂಕಟೇಶ ಬೊಗ್ರಿಮಕ್ಕಿ, ನಾರದನಾಗಿ ಮಹಾಬಲೇಶ್ವರ ಗೌಡ, ಅಭಿಮನ್ಯುವಾಗಿ ಕು. ತುಳಸಿ ಹೆಗಡೆ ಇತರರು ಇದ್ದರು.


    ಚಂದ್ರಾವಳಿಯಲ್ಲಿ ಆಖ್ಯಾನದಲ್ಲಿ ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಸುನೀಲ ಭಂಡಾರಿ, ವಿಘ್ನೇಶ್ವರ ಗೌಡ ಸಹಕಾರ ನೀಡಿದರು.
    ಕೃಷ್ಣ ನಾಗಿ ವಿನಯ ಬೇರೊಳ್ಳಿ, ಚಂದ್ರಾವಳಿಯಾಗಿ ಸುಬ್ರಹ್ಮಣ್ಯ ಯಲಗುಪ್ಪ, ರಾಧೆಯಾಗಿ ನಾಗರಾಜ ಕುಂಕಿಪಾಲ, ಚಂದಗೋಪನಾಗಿ ಅಶೋಕ ಭಟ್ಟ, ಅಜ್ಜಿಯಾಗಿ ಶ್ರೀಧರ ಭಟ್ಟ ಕಾಸರಕೋಡ ಇತರರು ಇದ್ದರು. ಗುರು ಕಾನಸೂರು ನಿರ್ವಹಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top