ಹೊನ್ನಾವರ: ಪುರಾಣ ಪ್ರಸಿದ್ಧ ಇಡಗುಂಜಿ ಶ್ರೀವಿನಾಯಕ ದೇವಾಲಯದಲ್ಲಿ ಅಂಗಾರಕ ಸಂಕಷ್ಟಿಯ ಪ್ರಯುಕ್ತ ಮಂಗಳವಾರ ಲಕ್ಷಾಂತರ ಭಕ್ತರು ಶ್ರೀದೇವರ ಸನ್ನಿಧಿಗೆ ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು.
ಅಂಗಾರಕ ಸಂಕಷ್ಟಿಯ ಪ್ರಯುಕ್ತ ದೇವಾಲಯದಲ್ಲಿ ಮಂಗಳವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆದವು. ಲಕ್ಷಾಂತರ ಭಕ್ತರು ಸಾಗರೋಪಾದಿಯಲ್ಲಿ ಬಂದು ಶ್ರೀದೇವರಿಗೆ ಹಣ್ಣು- ಕಾಯಿ, ಬಾಳೆಗೊನೆ ಸೇವೆ, ಮಹಾಮಂಗಳಾರತಿ, ಬಿಲ್ವಾರ್ಚನೆ, ದೂರ್ವಾರ್ಚನೆ, ಪಂಚಖಾದ್ಯ ಸೇರಿದಂತೆ ಇತ್ಯಾದಿ ಸೇವೆ ಸಲ್ಲಿಸಿದರು. ನಾಡಿನ ಮೂಲೆಮೂಲೆಯಿಂದ ಭಜಕರು ಆಗಮಿಸಿ ಶ್ರೀವಿನಾಯಕ ದೇವರ ದರ್ಶನ ಪಡೆದಿರುವುದು ವಿಶೇಷವಾಗಿತ್ತು.
ಮುಂಜಾನೆ 5 ಗಂಟೆಯಿಂದ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಭಕ್ತರು ರಾತ್ರಿ 9 ಗಂಟೆಯವರೆಗೂ ಶ್ರೀದೇವರ ದರ್ಶನ ಪಡೆದರು. ಬೆಳಿಗ್ಗೆ 7 ಗಂಟೆಗೆ ಪಂಚಾಮೃತಾಭಿಷೇಕದೊಂದಿಗೆ ದೈನಂದಿನ ಸೇವೆಗಳು ನಡೆದವು. ಬೆಳಿಗ್ಗೆ 10 ಗಂಟೆಯಿಂದ ಗಣಹೋಮ ಸಂಕಲ್ಪ ಪ್ರಾರಂಭವಾಗಿದ್ದು, ಸುಮಾರು 300ಕ್ಕೂ ಹೆಚ್ಚು ಗಣಹೋಮ, ನೂರಾರು ಸತ್ಯಗಣಪತಿ ವೃತ ಕಥೆ ಹಾಗೂ 30,000ದಷ್ಟು ತೆಂಗಿನಕಾಯಿ ಸಮರ್ಪಣೆಯಾಗಿದೆ. 100 ಕ್ವಿಂಟಾಲ್ ಪಂಚಖಾದ್ಯ ಶ್ರೀಗಣಪತಿಗೆ ಸಮರ್ಪಣೆಯಾಗಿದೆ ಎಂದು ಪ್ರಧಾನ ಅರ್ಚಕರಾದ ವೇದ ಮೂರ್ತಿ ಮಂಜುನಾಥ ಭಟ್ಟ ಅವರು ಮಾಹಿತಿ ನೀಡಿದರು.
ಭಕ್ತರ ಅನುಕೂಲಕ್ಕಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಪೆÇಲೀಸರು ವಾಹನ ಪಾಕಿರ್ಂಗ್, ದೇವರ ದರ್ಶನಕ್ಕೆ ಸೂಕ್ತ ವ್ಯವಸ್ಥೆಯೊಂದಿಗೆ ಭದ್ರತೆ ಕಲ್ಪಿಸಿದ್ದರು.