• Slide
  Slide
  Slide
  previous arrow
  next arrow
 • ಏ.24ಕ್ಕೆ ಮಧುಕೇಶ್ವರ ದೇವರ ವಾರ್ಷಿಕ ಪೂಜಾ ಮಹೋತ್ಸವ

  300x250 AD

  ಶಿರಸಿ: ತಾಲ್ಲೂಕಿನ ಬಿದ್ರಳ್ಳಿಯ ಮಧುಕೇಶ್ವರ ದೇವರ ವಾರ್ಷಿಕ ಪೂಜಾ ಮಹೋತ್ಸವ ಏ.24ರಂದು ನಡೆಯಲಿದೆ.

  ಈ ಪ್ರಯುಕ್ತ ಅಂದು ಬೆಳಿಗ್ಗೆ 9ರಿಂದ 12 ಗಂಟೆಯವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. 12 ರಿಂದ 1 ಗಂಟೆವರೆಗೆ ಮಹಾಪೂಜೆ, ಪ್ರಸಾದ ವಿತರಣೆ, 1 ರಿಂದ 3 ಗಂಟೆವರೆಗೆ ಅನ್ನಸಂತರ್ಪಣೆ ನಡೆಯಲಿದೆ.

  300x250 AD

  ರಾತ್ರಿ 9ರಿಂದ ದೇವಸ್ಥಾನದ ಆವರಣದಲ್ಲಿ ನಾರಾಯಣ ದಾಸ ಹೀಪನಳ್ಳಿ ಅವರಿಂದ ‘ದಕ್ಷ ಯಜ್ಞ’ ಹರಿಕಥೆ ನಡೆಯಲಿದೆ. ಅವರಿಗೆ ಕೆ.ಪಿ.ಹೆಗಡೆ ದಾಸನಕೊಪ್ಪ ಹಾರ್ಮೋನಿಯಂ, ಆನಂದ ಭಟ್ ದಾಯಿಮನೆ ತಬಲಾ ಸಾಥ್ ನೀಡಲಿದ್ದಾರೆ. ಭಕ್ತಾದಿಗಳು ಈ ಎಲ್ಲ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನದ ಆಡಳಿತ ಮಂಡಳಿಯವರು ಕೋರಿದ್ದಾರೆ.


  Share This
  300x250 AD
  300x250 AD
  300x250 AD
  Leaderboard Ad
  Back to top