ಕಾರವಾರ: ತಾಲೂಕಿನ ಚೆಂಡಿಯಾ ಗ್ರಾಮದಲ್ಲಿ ಮಂಗಳವಾರ ಬಿಜೆಪಿ ಗ್ರಾಮೀಣ ಮಹಿಳಾ ಮೋರ್ಚಾದ ವತಿಯಿಂದ ನಡೆದ ಪೋಷಣಾ ಅಭಿಯಾನದಲ್ಲಿ ಅಂಗನವಾಡಿ ಶಿಕ್ಷಕಿಯರಿಗೆ ಸನ್ಮಾನಿಸಲಾಯಿತು.
ಬಿಜೆಪಿ ಗ್ರಾಮೀಣ ಮಹಿಳಾ ಮೋರ್ಚಾದ ಅಧ್ಯಕ್ಷೆ ಸಾಕ್ಷಿ ಹಾರವಾಡೆಕರ್ ಅಂಗನವಾಡಿ ಶಿಕ್ಷಕಿಯರಾದ ಮುಕ್ತಾ ನಾಯ್ಕ, ಲತಾ ಕಳಸ, ಪ್ರಿಯಲತಾ ನಾಯ್ಕ, ಮಧುಶ್ರಿ ನಾಯ್ಕ, ರೇಷ್ಮ ಗುನಗಿ, ಭಾಗ್ಯಶ್ರೀ ಭಂಡಾರಿ, ನಾಗವೇಣಿ ಗುನಗಿ ಹಾಗೂ ಅಂಗನವಾಡಿ ಸಹಾಯಕಿ ಪ್ರಮೀಳಾ ತಳೇಕರ್ ಅವರಿಗೆ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮೀಣ ಮಂಡಲ ಪ್ರಧಾನ ಕಾರ್ಯದರ್ಶಿ ಸುಜಾತಾ ಬಾಂದೇಕರ ಹಾಗೂ ಮುಕ್ತಾ ಗುನಗಿ ಪೋಷಣ ಅಭಿಯಾನದ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ಗ್ರಾಮೀಣ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ವೇತಾ ಭಟ್ಕಲ್ಕರ್, ಗ್ರಾಮೀಣ ಮಹಿಳಾ ಮೋರ್ಚಾ ಕಾರ್ಯದರ್ಶಿ ಅಶ್ವಿನಿ ಮಾಲ್ಸೇಕರ್, ಚಂಡಿಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕಲ್ಪನಾ ನಾಯ್ಕ ಹಾಗೂ ಚಂಡಿಯ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಸತೀಶ್ ತಳೇಕರ ಇದ್ದರು.