ಅಂಕೋಲಾ: ಮಳಲಗಾಂವ್ ನ ಸ್ಪೂರ್ತಿ ಯುವಕ ಸಂಘದ ಆಶ್ರಯದಲ್ಲಿ ಸಂಘದ ಸ್ಥಾಪನೆಯ ದ್ವಿತೀಯ ವರ್ಷದ ಸ್ಮರಣಾರ್ಥ ನಡೆದ ಸತ್ಯನಾರಾಯಣ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಸಭೆಯನ್ನು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಯುವಕರು ಉತ್ತಮ ಸಂಘಟನೆ ಮಾಡುವ ಮೂಲಕ ಸಮಾಜದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಸಿದ್ದಿ ಜನಾಂಗದ ಏಳಿಗೆಗಾಗಿ ಶ್ರಮಿಸಿದ ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಭಾರತೀಯ ರಾಷ್ಟ್ರೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಿವರಾಮ ಗಾಂವ್ಕರ,ಡೋಗ್ರಿ ಪಂಚಾಯತ ಉಪಾಧ್ಯಕ್ಷ ವಿನೋದ್ ಭಟ್, ಸದಸ್ಯ ಮಂಜುನಾಥ ಸಿದ್ದಿ, ನಿತ್ಯಾನಂದ ಭಟ್, ಟಿ.ಎಸ್.ಎಸ್.ನಿರ್ದೆಶಕ ಸಂತೋಷ ಭಟ್, ಹಿರಿಯರಾದ ಜುಮ್ಮಾ ಸಿದ್ದಿ,ಪುಟ್ಟಾ ಸಿದ್ದಿ, ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಊರಿನ ಹಿರಿಯರು ಹಾಗೂ ನಾಗರೀಕರು ಉಪಸ್ಥಿತರಿದ್ದರು.