ಯಲ್ಲಾಪುರ: ಜಿಲ್ಲಾಡಳಿತ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉತ್ತರ ಕನ್ನಡ ಜಿಲ್ಲಾ ಆಸ್ಪತ್ರೆ, ತಾಲೂಕ ಆಡಳಿತ ಹಾಗೂ ತಾಲೂಕಾ ಮಟ್ಟದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ 75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ತಾಲೂಕಾ ಮಟ್ಟದ ಆರೋಗ್ಯ ಮೇಳವನ್ನು ಆಯೋಜಿಸಲಾಗಿದೆ.
ಏ. 24 ರವಿವಾರ ಬೆಳಿಗ್ಗೆ 9.30 ರಿಂದ ಸಂಜೆ 4 ಗಂಟೆಯವರೆಗೆ ಯಲ್ಲಾಪುರ ತಾಲ್ಲೂಕು ಆಸ್ಪತ್ರೆ ಆವರಣದಲ್ಲಿ ನಡೆಯಲಿದೆ.
ಜನರಲ್ ಮೆಡಿಸಿನ್, ಮಲೇರಿಯಾ ನಿಯಂತ್ರಣ, ಹೃದ್ರೋಗ ತಪಾಸಣೆ,ಇಸಿಜಿ ತಪಾಸಣೆ,ಮಕ್ಕಳ ಆರೋಗ್ಯ,ಲಸಿಕಾಕರಣ, ಕಣ್ಣಿನ ಪೊರೆ ತಪಾಸಣೆ, ಚರ್ಮದ ತಪಾಸಣೆ,ದಂತ ತಪಾಸಣೆ,ಮಾನಸಿಕ ಆರೋಗ್ಯ ಹೀಗೆ ಮುಂತಾದ ಸೇವೆಗಳನ್ನು ಆರೋಗ್ಯ ಮೇಳದಲ್ಲಿ ಉಚಿತವಾಗಿ ನೀಡುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ತಾಲೂಕ ಆರೋಗ್ಯಾಧಿಕಾರಿಗಳ ಕಚೇರಿ,ಯಲ್ಲಾಪುರ ಮತ್ತು ತಾಲೂಕಿನ ಎಲ್ಲಾ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವಿಚಾರಿಸಲು ಕೋರಿದೆ.
ಆರೋಗ್ಯ ಮೇಳಕ್ಕೆ ಬರುವ ಎಲ್ಲರೂ ಕಡ್ಡಾಯವಾಗಿ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ತರಬೇಕಾಗಿ ವಿಶೇಷ ಸೂಚನೆ ನೀಡಲಾಗಿದೆ.