ಅಂಕೋಲಾ : ಲಂಚ ಸ್ವೀಕರಿಸುತಿದ್ದ ಅಬಕಾರಿ ಪ್ರೊಪೇಷನಲ್ ಪಿ.ಎಸ್.ಐ ಮೇಲೆ ಎಸಿಬಿ ದಾಳಿ ನಡೆಸಿ ಲಂಚ ಪಡೆಯುತಿದ್ದಾಗ ಹಣದ ಸಮೇತ ಬಂಧಿಸಿದ ಘಟನೆ ತಾಲೂಕಿನ ಅಬಕಾರಿ ಕಚೇರಿಯಲ್ಲಿ ನೆಡೆದಿದೆ.
ಕಾರವಾರದ ಎಸಿಬಿ ಡಿ.ವೈ.ಎಸ್.ಪಿ ಪ್ರಕಾಶ್ ನೇತ್ರತ್ವದ ತಂಡದಿಂದ ದಾಳಿ ನಡೆದಿದ್ದು ಅಬಕಾರಿ ಪ್ರೊಪೇಷನರಿ ಪಿ.ಎಸ್.ಐ ಪ್ರೀತಿ ರಾಥೋಡ್ ಲಂಚ ಪಡೆಯುವಾಗ ಸಿಕ್ಕಿಬಿದ್ದ ಅಧಿಕಾರಿಯಾಗಿದ್ದಾರೆ.
ಎರಡು ತಿಂಗಳ ಹಿಂದೆ ಅಂಕೋಲದ ಹಾರವಾಡದಲ್ಲಿ ಮದ್ಯವನ್ನು ಕಾರವಾರ ಮೂಲದ ಮುಸ್ತಾಕ್ ಎಂಬುವವರು ದ್ವಿಚಕ್ರ ವಾಹನದಲ್ಲಿ ಕೊಂಡೊಯ್ಯುತಿದ್ದು ಈ ವೇಳೆ ವಾಹನ ಸಮೇತ ಮದ್ಯವನ್ನು ವಶಪಡಿಸಿಕೊಳ್ಳಲಾಗಿತ್ತು.
ದ್ವಿಚಕ್ರ ವಾಹನವು ಮುಸ್ತಾಕ್ ಎಂಬುವವರ ಸ್ನೇಹಿತನ ವಾಹನವಾಗಿದ್ದು ಆತನ ವಿರುದ್ದವೂ ಪ್ರಕರಣ ದಾಖಲಿಸುವುದಾಗಿ ಪ್ರೀತಿ ರಾಥೋಡ್ ಬೆದರಿಕೆ ಹಾಕಿದ್ದು, ವಾಹನ ಮತ್ತು ದ್ವಿಚಕ್ರ ವಾಹನದ ವಾರಸುದಾರನನ್ನು ಪ್ರಕರಣದಿಂದ ಕೈ ಬಿಡಲು ₹ 50 ಸಾವಿರ ಲಂಚ ಕೇಳಿದ್ದರು.ಇದಲ್ಲದೇ ಹಲವು ಬಾರಿ ಆರೋಪಿಗೆ ದೂರವಾಣಿ ಕರೆಮಾಡಿ ಹಣ ನೀಡುವಂತೆ ಬೆದರಿಸಿದ್ದಳು.
ಹೀಗಾಗಿ ಈ ಕುರಿತು ಮುಸ್ತಾಕ್ ಎಸಿಬಿ ಕಚೇರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಕಚೇರಿಯಲ್ಲಿ ಹಣ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.ಘಟನೆ ಸಂಬಂಧ ಕಾರವಾರ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಎಸಿಬಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದು ನ್ಯಾಯಾಂಗದ ವಶಕ್ಕೆ ನೀಡಿದ್ದಾರೆ.