• Slide
    Slide
    Slide
    previous arrow
    next arrow
  • ಶಿರಸಿ ಲಯನ್ಸ ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಬೇಸಿಗೆ ಶಿಬಿರ

    300x250 AD

    ಶಿರಸಿ:ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಹಾಗೂ ಶಿರಸಿ ಲಯನ್ಸ ಎಜುಕೇಷನ್ ಸೊಸೈಟಿ ಇವರ ಸಹಯೋಗದೊಂದಿಗೆ ಶಿರಸಿ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ, ಶಿರಸಿ ಲಯನ್ಸ್ ಸ್ಕೌಟ್ಸ್ & ಗೈಡ್ಸ್ ದಳದ ಬೇಸಿಗೆ ಶಿಬಿರ ಕಾರ್ಯಕ್ರಮವನ್ನು ಏ 19 ರಿಂದ ಏ . 22 ರವರೆಗೆ ಲಯನ್ಸ್ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.


    ಈ ನಾಲ್ಕು ದಿನಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವಿವಿಧ ಆಯಾಮಗಳ ಕುರಿತು ವಿವಿಧ ಸಂಪನ್ಮೂಲ ವ್ಯಕ್ತಿಗಳು ಮಾರ್ಗದರ್ಶನ ನೀಡಲಿದ್ದಾರೆ. ಈ ಶಿಬಿರದ ಕಾರ್ಯಕ್ರಮಗಳನ್ನು ಶಿರಸಿ ಲಯನ್ಸ್ ಎಜ್ಯುಕೇಷನ್ ಸೊಸೈಟಿಯ ಅಧ್ಯಕ್ಷ ಲಯನ್ ಪ್ರೊ.ಎನ್.ವಿ.ಜಿ ಭಟ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಸಿದರು.


    ಈ ಸಂದರ್ಭದಲ್ಲಿ ಗ್ರಂಥಾಲಯದ ಕ್ಯಾಂಪಸ್ (ಮಕ್ಕಳ ಕೈಬರಹದ) 3ನೇ ಸಂಚಿಕೆಯನ್ನು ಅನಾವರಣಗೊಳಿಸಿ ಮಾತನಾಡುತ್ತ, ಮಕ್ಕಳ ಸಾಧನೆಗೆ ಬೇಸಿಗೆ ಶಿಬಿರಗಳು ಸಹಾಯಕ ಹಾಗೂ ವಿಶೇಷವಾಗಿ ಲಯನ್ಸ ಮಕ್ಕಳು ಅತಿ ಹೆಚ್ಚಿನ ರಾಜ್ಯಪಾಲ ಪುರಸ್ಕಾರ ಪಡೆದಿರುವುದು ಸಂತಸ ತಂದಿದೆ ಎಂದು ನುಡಿದು ಎಲ್ಲರಿಗೂ ಶುಭ ಹಾರೈಸಿದರು.

    300x250 AD


    ಶಿರಸಿ ಲಯನ್ಸ ಶಾಲೆಯ ಮುಖ್ಯೋಪಾಧ್ಯಾಯ ಶಶಾಂಕ ಹೆಗಡೆ ಶಿಬಿರವನ್ನು ಉದ್ದೇಶಿಸಿ ಮಾತನಾಡಿ ನಮ್ಮ ವ್ಯಕ್ತಿತ್ವ ಭಿನ್ನವಾಗಿ ಕಾಣುವುದು, ನಾವು ನಮ್ಮನ್ನ ಇಂತಹ ಕ್ರಿಯಾತ್ಮಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಸಾಧ್ಯ, ಶಿಸ್ತು, ಕಾರ್ಯಬದ್ಧತೆ, ನಾಯಕತ್ವ, ಉತ್ತಮ ಮನೋಭಾವದ ಬೇಳವಣಿಗೆಗೆ ಈ ಶಿಬಿರ ಸಹಾಯವಾಗಲಿ ಎಂದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ಮಾತುಗಳನ್ನಾಡಿದರು.


    ಅತಿಥಿಗಳಾಗಿ ಆಗಮಿಸಿದ ಭಾರತ್ ಸ್ಕೌಟ್ಸ್ & ಗೈಡ್ಸ್, ಜಿಲ್ಲಾ ಸಂಸ್ಥೆ, ಶಿರಸಿಯ ಉಪಾಧ್ಯಕ್ಷರು ಶ್ರೀಮತಿ ಸೂರಜರಾಣಿ ಪ್ರಭು, ಜಿಲ್ಲಾ ಮುಖ್ಯ ಆಯುಕ್ತರು ಎಂ.ಎಂ.ಭಟ್ ಕಾರೆಕೊಪ್ಪ, ಜಿಲ್ಲಾ ಗೈಡ್ ಆಯುಕ್ತರಾದ ಜ್ಯೋತಿ ಭಟ್,ಸಹಾಯಕ ರಾಜ್ಯ ಸಂಘಟನಾ ಆಯುಕ್ತರಾದ ವೀರೆಶ್ ಮಾದರ್, ಇವರುಗಳು ಮಕ್ಕಳಿಗೆ ಶುಭಕೋರಿದರು. ಶಿಬಿರದ ನಾಯಕಿ ಶಿರಸಿ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ಗೈಡ್ ಕ್ಯಾಪ್ಟನ್ ಶ್ರೀಮತಿ ಚೇತನಾ ಪಾವಸ್ಕರ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಶಿಬಿರದ ನಾಯಕ, ಸ್ಕೌಟ್ ಮಾಸ್ಟರ್ ರಾಘವೇಂದ್ರ ಹೊಸೂರು, ಇವರು ವಂದನಾರ್ಪಣೆ ನಡೆಸಿಕೊಟ್ಟರು.

    Share This
    300x250 AD
    300x250 AD
    300x250 AD
    Leaderboard Ad
    Back to top