• Slide
    Slide
    Slide
    previous arrow
    next arrow
  • ಮೇ.2ರಿಂದ ಯುವ ಕಮಲ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ

    300x250 AD

    ಕಾರವಾರ: ಬಿಜೆಪಿ ಯುವಮೋರ್ಚಾ ಕಾರವಾರ ನಗರ ಮಂಡಲದಿಂದ ಯುವ ಕಮಲ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯನ್ನು ಮೇ 2ರಿಂದ ನಗರವ್ಯಾಪ್ತಿಯ ಜನರಿಗೆ ಆಯೋಜನೆ ಮಾಡಲಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ಶುಭಂ ಕಳಸ ಹೇಳಿದರು.

    ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 2ರಿಂದ ನಗರದ ಮಾಲಾದೇವಿ ಮೈದಾನದಲ್ಲಿ ಪಂದ್ಯಾವಳಿ ನಡೆಸಲಾಗುತ್ತಿದೆ. ಪ್ರಥಮ ಬಹುಮಾನ 77,777 ರೂ. ನಗದು ಹಾಗೂ ಆಕರ್ಷಕ ಟ್ರೋಪಿ ಮತ್ತು ಎರಡನೇ ಬಹುಮಾನ 44,444 ರೂ. ಹಾಗೂ ಟ್ರೋಪಿ ಒಳಗೊಂಡಿರಲಿದೆ. ಪ್ರವೇಶ ಶುಲ್ಕ 3 ಸಾವಿರ ಇದ್ದು, ನಗರ ವ್ಯಾಪ್ತಿಯ 31 ವಾರ್ಡ್‍ನ ತಂಡಗಳು ಭಾಗವಹಿಸಬಹುದಾಗಿದೆ. ಆದರೆ ತಂಡದಲ್ಲಿ ಆಯಾ ವಾರ್ಡ್‍ನ ಜನರು ಮಾತ್ರ ಇರಬೇಕು. ಇದು ಪಕ್ಷಾತೀತ ಪಂದ್ಯಾವಳಿಯಾಗಿದ್ದು, ವಾರ್ಡ್‍ನಿಂದ ಎಷ್ಟೇ ತಂಡಗಳು ಬೇಕಾದರು ಕೂಡ ಭಾಗವಹಿಸಬಹುದಾಗಿದೆ ಎಂದರು.

    ಭಾಗವಹಿಸುವ ಆಟಗಾರರು ಮತದಾರರ ಗುರುತಿನ ಚೀಟಿ ಕಡ್ಡಾಯವಾಗಿ ನೀಡಬೇಕು. ಸಮವಸ್ತ್ರ ಕೂಡ ಕಡ್ಡಾಯವಾಗಿದ್ದು, ಪಂದ್ಯವೂ 8 ಓವರ್ ಗಳದ್ದಾಗಿರುತ್ತದೆ. ನೊಂದಣಿಗೆ ಏ.27 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಶುಭಂ ಕಳಸ (ಮೊ.ಸಂ: 91136 52005), ನಾಗರಾಜ ದುರ್ಗೇಕರ್ (ಮೊ.ಸಂ: 88807 83667), ಅವಿನಾಶ ಉಳ್ವೇಕರ್: (ಮೊ.ಸಂ: 98456 05808) ಅವರನ್ನು ಸಂಪರ್ಕಿಸಬಹುದಾಗಿದೆ.

    300x250 AD

    ಸುದ್ದಿಗೋಷ್ಠಿಯಲ್ಲಿ ಅವಿನಾಶ ಗಣಪತಿ ಉಳ್ವೇಕರ್, ನಾಗರಾಜ, ಅಮಿತ್ ನಾಯ್ಕ, ಅಭಿಷೇಕ ಹರಿಕಂತ್ರ, ನಿಶಾಂತ ಬಡಿಗೇರ, ರಾಹುಲ್ ಪಡುವಳಕರ್, ಅನಿಲ್, ರಾಹುಲ್, ಸಂಕೇತ್ ಇದ್ದರು.


    Share This
    300x250 AD
    300x250 AD
    300x250 AD
    Leaderboard Ad
    Back to top