• first
  second
  third
  Slide
  previous arrow
  next arrow
 • ದೊಡ್ಮನೆ ಗಣೇಶ ಹೆಗಡೆ ಸ್ಮೃತಿ ಪುರಸ್ಕಾರ ಪ್ರದಾನ

  300x250 AD

  ಸಿದ್ದಾಪುರ: ಶೃಂಗೇರಿ ಶಂಕರಮಠದ ಸಂಸ್ಕೃತಿ ಸಂಪದ ಇವರ ಆಶ್ರಯದಲ್ಲಿ ಪಟ್ಟಣದ ಶಂಕರಮಠ ಶ್ರೀ ಭಾರತೀತೀರ್ಥಸ್ವಾಮಿ ಸಭಾಂಗಣದಲ್ಲಿ ಅಗ್ನ್ಯಾರಾಧನಾ ಕ್ಷೇತ್ರದ ಶ್ರೌತಾಗ್ನಿಯನ್ನು ಅನುದಿನವು ಆರಾಧಿಸುತ್ತಿರುವ ಮಹಾಲಕ್ಷ್ಮೀ ಮತ್ತು ವಿದ್ವಾನ್ ನರಸಿಂಹ ಭಟ್ಟ ನಡಗೋಡು ಇವರಿಗೆ ದೊಡ್ಮನೆ ಗಣೇಶ ಹೆಗಡೆ ಸ್ಮೃತಿ ಪುರಸ್ಕಾರ ನೀಡಿ ಗೌರವಿಸಲಾಯಿತು.

  ಶಿರಳಗಿಯ ಶ್ರೀಚೈತನ್ಯ ರಾಜಾರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿದರು. ಟಿ.ಎಂ.ಎಸ್. ಅಧ್ಯಕ್ಷ ಆರ್.ಎಂ.ಹೆಗಡೆ ಬಾಳಗೋಡ ಉಪಸ್ಥಿತರಿದ್ದು ಮಾತನಾಡಿದರು. ಸ್ಮೃತಿ ಪುರಸ್ಕಾರ ಪಡೆದ ನರಸಿಂಹ ಶಿವರಾಮ ಹೆಗಡೆ ಮಾತನಾಡಿದರು.

  300x250 AD

  ಋತ್ವಿಜರು ವೇದಘೋಷ ಹೇಳಿದರು. ಶೃಂಗೇರಿ ಶಂಕರ ಮಠದ ಧರ್ಮಾಧಿಕಾರಿ ದೊಡ್ಮನೆ ವಿಜಯ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ವಿ.ಬಾಲೀಗದ್ದೆ ಶಂಕರ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು. ಗಣಪತಿ ಹೆಗಡೆ ವಂದಿಸಿದರು.

  Share This
  300x250 AD
  300x250 AD
  300x250 AD
  Back to top