• first
    second
    third
    previous arrow
    next arrow
  • ಅಕಾಲಿಕವಾಗಿ ಸುರಿದ ಮಳೆ; ಅಡಿಕೆ ತೋಟಕ್ಕೆ ಹಾನಿ

    300x250 AD

    ಜೊಯಿಡಾ: ತಾಲೂಕಿನ ಹುಡಸಾ ಗ್ರಾಮದಲ್ಲಿ ಭಾನುವಾರ ಸುರಿದ ಭಾರೀ ಗಾಳಿ ಮಳೆಯಿಂದಾಗಿ ಭಾರೀ ಗಾತ್ರದ ಮರಗಳು ಬಿದ್ದು ಅಡಿಕೆ ತೋಟಕ್ಕೆ ಹಾನಿ ಉಂಟಾಗಿದೆ.

    ಹುಡಸಾ ಗ್ರಾಮದ ಸುಮಾರು ಹತ್ತಕ್ಕೂ ಹೆಚ್ಚು ಜನರ ತೋಟಗಳಲ್ಲಿ ಮರಗಳು ಬಿದ್ದು ಸಾಕಷ್ಟು ಅಡಿಕೆ ತೋಟಗಳು ಹಾನಿಗಿಡಾಗಿವೆ. ಜನರು ಸಾಲ ಮಾಡಿ ತೋಟಗಳನ್ನು ಮಾಡಿದ್ದು ಸಧ್ಯ ಫಲ ಬರುವ ಸಂದರ್ಭದಲ್ಲಿ ಹಾನಿ ಉಂಟಾಗಿದೆ.

    300x250 AD

    ಹಾನಿಯಾದವರಿಗೆ ಕೂಡಲೇ ಕಂದಾಯ, ಅರಣ್ಯ ಇಲಾಖೆ ವತಿಯಿಂದ ಪರಿಹಾರ ಸಿಗಬೇಕೆಂದು ಜೊಯಿಡಾ ಗ್ರಾಮ ಪಂಚಾಯತ ಸದಸ್ಯ ರೂಪೇಶ ದೇಸಾಯಿ ಆಗ್ರಹಿಸಿದ್ದಾರೆ.

    Share This
    300x250 AD
    300x250 AD
    300x250 AD
    Back to top