ಯಲ್ಲಾಪುರ; ರಾಜ್ಯದ ಸಮಗ್ರ ನೀರಾವರಿ ಯೋಜನೆಗಳ ಜಾರಿಗೆ ಸಂಕಲ್ಪಿಸಿ ಜೆಡಿಎಸ್ ಹಮ್ಮಿಕೊಂಡಿದ್ದ ಜನತಾ ಜಲರಥಯಾತ್ರೆಯನ್ನು ಪಟ್ಟಣದ ಬಸವೇಶ್ವರ ಸರ್ಕಲ್ ಬಳಿ ಪಕ್ಷದ ಜಿಲ್ಲಾಧ್ಯಕ್ಷ ಗಣಪಯ್ಯ ಗೌಡ ಹಾಗೂ ಜೆಡಿಎಸ್ ಮುಖಂಡರು ಮಾಲಾರ್ಪಣೆ ಮಾಡಿ ಸ್ವಾಗತಿಸಿದರು.ದಾಂಡೇಲಿಯಿಂದ ಕಲಶದಲ್ಲಿ ಕಾಳಿನದಿ ನೀರನ್ನು ಹೊತ್ತುತಂದ ಜಲರಥಯಾತ್ರೆಯನ್ನು ಮಧ್ಯಾಹ್ನ ಯಲ್ಲಾಪುರದಲ್ಲಿ ಬರಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ತಾಲೂಕಾ ಅಧ್ಯಕ್ಷ ಬೆನಿತ್ ಸಿದ್ದಿ,ಕ್ಷೇತ್ರಾಧ್ಯಕ್ಷ ಮುತ್ತಣ್ಣ ಎಸ್.ಸಂಗೂರಮಠ,ಮುಂಡಗೋಡ ಅಧ್ಯಕ್ಷ ತುಕಾರಾಮ ಗುಡಕರ್,ಪ್ರಮುಖರಾದ ಪಿ.ಟಿ.ನಾಯ್ಕ,ರಮೇಶ ನಾಯ್ಕ,ಶಶಿ ಭೂಷಣ ಹೆಗಡೆ,ಉದಯ ಗೌಡ,ಮುನಾಪ ಮಿರ್ಜಾನಕರ್,ಕೇಮಣ್ಣ ಲಮಾಣಿ,ಸುಧಾಕರ ನಾಯ್ಕ ಮಂಚಿಕೇರಿ,ರಾಜೇಸಾಬ್ ಸಿದ್ದಿ,ಬಂಡಾರಿ ವಕೀಲರು ಮುಂತಾದವರು ಇದ್ದರು.ನಂತರ ಮೆರವಣಿಗೆಯ ಮೂಲಕ ಪಟ್ಟಣದ ವಿವಿದೆಡೆ ಸಂಚರಿಸಿ ಜಲಜಾಗ್ರತಿ ಮೂಡಿಸಿ ರವೀಂದ್ರನಗರದ ದೇವಿ ಗದ್ದುಗೆ ಬಳಿ ಮೆರವಣಿಗೆ ಸಂಪನ್ನಗೊಂಡಿತು.