ಸಿದ್ದಾಪುರ ;ಕಾನಸೂರು ಶ್ರೀ ರಾಮೇಶ್ವರ ದೇವರ14ನೇ ವಾರ್ಷಿಕೋತ್ಸವ ಹಾಗೂ ಶ್ರೀ ರುದ್ರಾಂಜನೇಯ ದೇವರ 7ನೇ ವಾರ್ಷಿಕೋತ್ಸವ
ಏ 22 ಶುಕ್ರವಾರ ನಡೆಯಲಿದೆ .
ಆನಿಮಿತ್ತ ಲೋಕಕಲ್ಯಾಣಾರ್ಥವಾಗಿ ಗಣಹವನ,ದುರ್ಗಾಹವನ,ರುದ್ರಹವನ ನಡೆಯಲಿದೆ. ಮಧ್ಯಾಹ್ನ12.30ಕ್ಕೆಮಹಾಮಂಗಳಾರತಿ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ4ಗಂಟೆಯಿಂದ ಸೇವಾ ರತ್ನಾ ತಾಳಮದ್ದಳೆ ಕೂಟದವರಿಂದ ‘ಶ್ರೀರಾಮಪಟ್ಟಾಭಿಷೇಕ ತಾಳಮದ್ದಳೆ’ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ರುದ್ರಾಂಜನೇಯ ದೇವಸ್ಥಾನದ ಸಾವಿತ್ರಮ್ಮ ತಿಳಿಸಿದ್ದಾರೆ.