• Slide
    Slide
    Slide
    previous arrow
    next arrow
  • ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದ ಮಾಜಿ ಸಚಿವ ಈಶ್ವರಪ್ಪ

    300x250 AD

    ಗೋಕರ್ಣ: ಗ್ರಾಮೀಣಾಭಿವೃದ್ಧಿ ಖಾತೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಗೋಕರ್ಣಕ್ಕೆ ಭೇಟಿ ನೀಡಿ ಮಹಾಬಲೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಸುದ್ದಿಗಾರರೊಂದಿಗೆ ಮಾತನಾಡಲು ನಿರಾಕರಿಸಿ ‘ನಾನು ಖಾಸಗಿ ಕಾರ್ಯಕ್ರಮದ ನಿಮಿತ್ತ ಇಲ್ಲಿಗೆ ಬಂದಿದ್ದೇನೆ ದೇವರಿಗೆ ಪೂಜೆ ಸಲ್ಲಿಸಿ ಮನಸ್ಸಿನ ನಿರಾಳತೆ ಬಯಸಿದ್ದೇನೆ, ಯಾವುದೇ ರಾಜಕೀಯ ಮಾತನಾಡುವುದಿಲ್ಲ’ ಎಂದರು.


    ಮೊದಲು ಅಂಗಾರಕ ಸಂಕಷ್ಟಿಯ ನಿಮಿತ್ತ ಮಹಾಗಣಪತಿಗೆ ಪೂಜೆ ಸಲ್ಲಿಸಿ ನಂತರ ಮಹಾಬಲೇಶ್ವರ ದೇವಸ್ಥಾನದ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದರು.


    ಕುಮಟಾ ಶಾಸಕ ದಿನಕರ ಶೆಟ್ಟಿ,ಬಿಜೆಪಿ ಪ್ರಮುಖರಾದ ಪ್ರಮೋದ್ ಹೆಗಡೆ,ಗೋಕರ್ಣ ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜುನಾಥ್ ಜನ್ನು, ತೊರ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದು ಕವರಿ ಮುಂತಾದವರುಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    300x250 AD


    ಕೋಟಿತೀರ್ಥಕ್ಕೆ ಭೇಟಿ ನೀಡದ ಈಶ್ವರಪ್ಪ;
    ಸಚಿವರಾಗಿದ್ದಾಗ ತಾವೇ ಹೆಚ್ಚಿನ ಮುತುವರ್ಜಿವಹಿಸಿ ಅನುದಾನ ಬಿಡುಗಡೆ ಮಾಡಿದ್ದ ಕೋಟಿತೀರ್ಥದ ಸ್ವಚ್ಛತಾ ಕಾಮಗಾರಿಯನ್ನು ವೀಕ್ಷಿಸಲು ಆಸಕ್ತಿ ತೋರದೆ ಹಾಗೆಯೇ ತೆರಳಿದರು. 15 ದಿನಗಳ ಹಿಂದೆ ಗೋಕರ್ಣಕ್ಕೆ ಬಂದಿದ್ದಾಗ ಕೋಟಿತೀರ್ಥದ ಕಾಮಗಾರಿಯನ್ನು ಕಾಮಗಾರಿ ವೀಕ್ಷಿಸಲು ಮತ್ತೆ ನೋಡಲು ಬರುವುದಾಗಿ ತಿಳಿಸಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top