ಶಿರಸಿ: ದೇಶದ ಗಡಿಯೊಳಗೆ ವಿದೇಶಿ ಅಡಿಕೆ ಕಳ್ಳಸಾಗಾಣಿಕೆಯ ಮೂಲಕ ಪ್ರವೇಶಿಸುತ್ತಿದ್ದು, ಇದರಿಂದ ದೇಶೀ ಅಡಿಕೆಯ ಮಾರುಕಟ್ಟೆಗೆ ಹಾಗೂ ದೇಶದ ಬೊಕ್ಕಸಕ್ಕೆ ಹಾನಿಯಾಗಲಿದ್ದು, ಇದನ್ನುತಡೆಗಟ್ಟಲು ಕೇಂದ್ರ ಸರ್ಕಾರ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಶಿರಸಿಯ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ., ಆಗ್ರಹಿಸಿದೆ.
ಸಂಘದ ಅಧ್ಯಕ್ಷ ಶಾಂತಾರಾಮ ವಿ. ಹೆಗಡೆ ಶೀಗೆಹಳ್ಳಿಇವರ ಪರವಾಗಿ ಪ್ರಧಾನ ವ್ಯವಸ್ಥಾಪಕ ರವೀಶ ಅ. ಹೆಗಡೆ ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದು ಈಶಾನ್ಯ ಭಾರತದ ರಾಜ್ಯಗಳಾದ ಮಣಿಪುರ, ಮೇಘಾಲಯಗಳಿಗೆ ಮಯನ್ಮಾರ್‍ನಿಂದ ಅಡಿಕೆಯು ಕಳ್ಳ ಸಾಗಾಣಿಕೆಯಾಗುತ್ತಿದೆ.ಸುಂಕದ ಅಧಿಕಾರಿಗಳು ಈ ಕಳ್ಳಸಾಗಾಣಿಕೆಗೆ ಸಹಕರಿಸುತ್ತಿದ್ದಾರೆ.ಕಡಿಮೆ ಬೆಲೆಗೆ ಅಡಿಕೆ ಆಮದು ಆಗುತ್ತಿರುವುದರಿಂದ ದೇಶದ ಅಡಿಕೆ ಬೆಳೆಗಾರರಿಗೆ ಹಾನಿಯಾಗುತ್ತಿದ್ದು, ಈ ಕೂಡಲೇ ಕೇಂದ್ರ ಸರ್ಕಾರವು ಅಡಿಕೆಯ ಕಳ್ಳಸಾಗಾಣಿಕೆಯನ್ನು ನಿರ್ಬಂಧಿಸುವ ಕುರಿತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ದೇಶದಲ್ಲಿಉತ್ಪಾದನೆ ಆಗುವ ಅಡಿಕೆಯಲ್ಲಿ ಕೇವಲ 15 ಪ್ರತಿಶತದಷ್ಟು ಮಾತ್ರ ಸಹಕಾರ ಸಂಘಗಳ ಮೂಲಕ ವಹಿವಾಟು ನಡೆಸುತ್ತಿದ್ದು,85 ಪ್ರತಿಶತದಷ್ಟು ಖಾಸಗಿ ವರ್ತಕರು ವಹಿವಾಟು ನಡೆಸುತ್ತಿದ್ದಾರೆ. ಟಿ.ಎಸ್.ಎಸ್. ಶಿರಸಿ, ಕ್ಯಾಂಪ್ಕೋ ಮಂಗಳೂರು, ಮ್ಯಾಮ್ಕೋಸ್ ಶಿವಮೊಗ್ಗ, ತುಮ್ಕೋಸ್ ಚೆನ್ನಗಿರಿ ಮತ್ತಿತರ ಸಹಕಾರ ಸಂಘಗಳು ಶೇ.15 ರಷ್ಟುಅಡಿಕೆ ವಹಿವಾಟು ನಡೆಸಿ, ಪೂರ್ಣ ಪ್ರಮಾಣದಲ್ಲಿ ಜಿ.ಎಸ್.ಟಿ,.ಮಾರುಕಟ್ಟೆ ಶುಲ್ಕ, ಮತ್ತಿತರ ತೆರಿಗೆಯನ್ನುಸರ್ಕಾರಕ್ಕೆ ಪಾವತಿಸುತ್ತಿದ್ದಾರೆ. ಆದರೆ ಬಹುಪಾಲು ವಹಿವಾಟು ನಡೆಸುವ ಖಾಸಗಿ ವರ್ತಕರು ಅಡಿಕೆಯ ಮೇಲಿನ ಜಿ.ಎಸ್.ಟಿ,. ಮಾರುಕಟ್ಟೆ ಶುಲ್ಕ, ಮತ್ತಿತರ ತೆರಿಗೆಯನ್ನುಸಂಪೂರ್ಣ ಪ್ರಮಾಣದಲ್ಲಿಸರ್ಕಾರಕ್ಕೆ ಪಾವತಿಸದೇ ಇರುವುರಿಂದ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗುತ್ತಿದೆ.
ಅಡಿಕೆಯ ಬಹುಪಾಲು, ಪಾನ್ ಮಸಾಲಾ ತಯಾರಿಕೆಗೆ ಬಳಕೆಯಾಗುತ್ತಿದೆ. ಖಾಸಗಿ ವರ್ತಕರು ಪಾನ್ ಮಸಾಲಾ ತಯಾರಕರಿಗೆ ಅಧಿಕೃತ ಬಿಲ್ ಇಲ್ಲದೇ ಹೆಚ್ಚಿನ ಪ್ರಮಾಣದಲ್ಲಿಅಡಿಕೆ ಮಾರಾಟ ಮಾಡುವುದರಿಂದ ಸರ್ಕಾರಕ್ಕೆ ತೆರಿಗೆ ವಂಚಿಸುತ್ತಿದ್ದಾರೆ ಹಾಗೂ ಪಾನ್ ಮಸಾಲಾ ತಯಾರಕರೂ ಸಹ ಈ ಕುರಿತು ಸದನದಲ್ಲಿಕೇಂದ್ರ ಸಚಿವರು ನೀಡಿರುವ ಹೇಳಿಕೆಯಂತೆ, ಅಡಿಕೆಯಿಂದ ಸರ್ಕಾರಕ್ಕೆ ತೆರಿಗೆರೂಪದಲ್ಲಿ ಬರುತ್ತಿರುವ ಆದಾಯವನ್ನು ನಿಖರವಾಗಿ ತಿಳಿಯುವುದು ಕಷ್ಟವಾಗಿರುವುದರಿಂದ ತೆರಿಗೆ ವಂಚನೆ ಪ್ರಮಾಣವನ್ನುಕಂಡುಹಿಡಿಯಲು ಸಾಧ್ಯವಿಲ್ಲದಂತಾಗಿದೆ.
ಕೇಂದ್ರ ಸರ್ಕಾರವು ಈ ಕುರಿತು ಪರಿಶೀಲಿಸಿದಲ್ಲಿ, ತೆರಿಗೆಯನ್ನು ವಂಚಿಸಿಅಡಿಕೆ ವಹಿವಾಟು ನಡೆಸುವ ವರ್ತಕರ ಸಂಖ್ಯೆ ಹಾಗೂ ಸರ್ಕಾರದ ಬೊಕ್ಕಸಕ್ಕೆ ಇದರಿಂದ ಆಗುತ್ತಿರುವ ನಷ್ಟದ ಪ್ರಮಾಣವೂ ಸಹ ತಿಳಿದುಬರಲಿದೆ. ಹಾಗಾಗಿ ಸರ್ಕಾರವು ಈ ವಿಷಯವನ್ನುಗಂಭೀರವಾಗಿ ಪರಿಗಣಿಸಿ, ತೆರಿಗೆ ವಂಚನೆಯನ್ನು ತಪ್ಪಿಸುವ ನಿಟ್ಟಿನಲ್ಲಿಅವಶ್ಯಕ್ರಮ ಕೈಗೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.