ಶಿರಸಿ: ನಗರದ ರಾಯರಪೇಟೆಯಲ್ಲಿರುವ ಸಾಯಿ ಸಂಗೀತ ವಿದ್ಯಾಲಯದ 39ನೇ ವಾರ್ಷಿಕ ಸ್ನೇಹ ಸಮ್ಮೇಳನದ ಅಂಗವಾಗಿ ಅಗಲಿದ ಸಂಗೀತ ಚೇತನಗಳಿಗೆ ವಿಶೇಷ ಕಾರ್ಯಕ್ರಮವಾಗಿ ಸ್ವರಾಂಜಲಿ ಎಂಬ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ರಾಯರಪೇಟೆ ವೆಂಕಟ್ರಮಣ ದೇವಸ್ಥಾನದ ಸಭಾಭವನದಲ್ಲಿ ಏ.23ರಂದು ಬೆಳಿಗ್ಗೆ 10.30ರಿಂದ ಆರಂಭಗೊಳ್ಳಲಿರುವ ಕಾರ್ಯಕ್ರಮದಲ್ಲಿ ಸಂಜೆ 6.30ರವರೆಗೆ ಸಂಸ್ಥೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಸಂಗೀತ ವೈವಿಧ್ಯ ನಡೆಯಲಿದೆ.
ಸಾಯಂಕಾಲ 6.30ರಿಂದ ಸಂಗೀತ ಚೇತನಗಳಿಗೆ ಸ್ವರಾಂಜಲಿ ನಡೆಯಲಿದ್ದು ಶೀಗೆಹಳ್ಳಿಯ ಯಮುನಾ ರಂಗನಾಥ ಹೆಗಡೆ ಗೌರವ ಉಪಸ್ಥಿತಿ ಇರಲಿದೆ.
ಸಾಯಂಕಾಲ 7.30ರಿಂದ ಆಮಂತ್ರಿತ ಕಲಾವಿದರ ಕಾರ್ಯಕ್ರಮ ನಡೆಯಲಿದ್ದು ಭಾರ್ಗವ ಹೆಗಡೆ ಶೀಗೆಹಳ್ಳಿ ಅವರಿಂದ ಸಿತಾರ ವಾದನ ಮತ್ತು ವಿ.ಶ್ರೀಧರ ಹೆಗಡೆ ಕಲಭಾಗ ಅವರಿಂದ ಗಾಯನ ಕಾರ್ಯಕ್ರಮ ನಡೆಯಲಿದೆ. ತಬಲಾದಲ್ಲಿ ಗಣೇಶ ಗುಂಡ್ಕಲ್, ವಿಜಯೇಂದ್ರ ಅಜ್ಜೀಬಳ, ದಿನೇಶ ಗಿಳಿಗುಂಡಿ, ಸಂದೇಶ ಹೆಗಡೆ, ಕಿರಣ ಕಾನಗೋಡ ಪಾಲ್ಗೊಳ್ಳಲಿದ್ದು, ಹಾರ್ಮೊನಿಯಂನಲ್ಲಿ ದಾಸನಕೊಪ್ಪ ಕೆ.ಪಿ. ಹೆಗಡೆ, ಅಜಯ ವರ್ಗಾಸರ ಸಹಕರಿಸುವರು ಎಂದು ಸಾಯಿ ಸಂಗೀತ ವಿದ್ಯಾಲಯದ ಪ್ರಾಚಾರ್ಯ ಪಂ. ಎಂ.ಪಿ.ಹೆಗಡೆ ಪಡಿಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.