ದಾಂಡೇಲಿ: ನಗರದ ಕೆನರಾ ಬ್ಯಾಂಕಿನ ಕಾರ್ಯವೈಖರಿಯ ಬಗ್ಗೆ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ.
ಐದೈದು ಬಾರಿ ಚೆಕ್ ಪುಸ್ತಕ ತೆಗೆದುಕೊಂಡರೂ ಪ್ರತಿ ಚೆಕ್ ಪುಸ್ತಕದಲ್ಲಿಯೂ ಹೆಸರು ನಮೂದಿಸುವಲ್ಲಿ ತೊಂದರೆಯಾಗುತ್ತಿದ್ದು, ಹಣದ ವ್ಯವಹಾರಕ್ಕೆ ತೀವ್ರ ತೊಂದರೆಯಾಗಿದೆ. ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳು, ಸಿಬ್ಬಂದಿಗಳಲ್ಲಿ ಸಮಸ್ಯೆ ಬಗೆಹರಿಸುವಂತೆ ವಿನಂತಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಐದು ತಿಂಗಳಿನಿಂದ ಈ ಸಮಸ್ಯೆ ಎದುರಾಗಿದ್ದು, ಇದರಿಂದ ತೀವ್ರ ತೊಂದರೆಯಾಗಿದೆ. ಕೂಡಲೆ ಸಮಸ್ಯೆ ಬಗೆಹರಿಸಬೇಕೆಂದು ತೊಂದರೆಗೊಳಗಾದ ಗ್ರಾಹಕ ಜೇಮ್ಸ್ ಡೇವಿಡ್ ಪಡೀಗ ಮನವಿ ಮಾಡಿದ್ದಾರೆ.
ಉಳಿತಾಯ ಪುಸ್ತಕದಲ್ಲಿರುವ ಪ್ರಕಾರ ಚೆಕ್ ಪುಸ್ತಕದಲ್ಲಿ ಹೆಸರನ್ನು ನಮೂದಿಸದೇ ಸ್ಪೆಲ್ಲಿಂಗ್ ತಪ್ಪಾಗಿ ನಮೂದಿಸಲಾಗಿರುವುದರಿಂದ ಜೇಮ್ಸ್ ಡೇವಿಡ್ ಪಡೀಗ ಅವರಿಗೆ ತೊಂದರೆ ಎದುರಾಗಿದ್ದು, ಮೇಲಾಧಿಕಾರಿಗಳು ಈ ಬಗ್ಗೆ ಕೂಡಲೆ ಗಮನಹರಿಸಿ, ಸಮಸ್ಯೆ ಪರಿಹರಿಸಬೇಕಾಗಿದೆ.