• Slide
  Slide
  Slide
  previous arrow
  next arrow
 • ಜನವರಿ-2022 ನೇ ಮಾಹೆಯ ಹಾಲಿನ ಪ್ರೋತ್ಸಾಹಧನ ಜಮಾ

  300x250 AD

  ಶಿರಸಿ: ಜನವರಿ 2022 ನೇ ಮಾಹೆಯ ರ ಸರ್ಕಾರದಿಂದ ಹಾಲು ಉತ್ಪಾದಕರಿಗೆ ನೀಡಲಾಗುವ ರೂ. 5 ಪ್ರೋತ್ಸಾಹಧನವು ಆಧಾರ ಜೋಡಣೆಯಾದ ಹಾಲು ಉತ್ಪಾದಕ ರೈತರ ಬ್ಯಾಂಕ್ ಖಾತೆಗೆ ದಿನಾಂಕ ಏ.2 ಶನಿವಾರ ರಂದು ಜಮಾ ಆಗಿರುತ್ತದೆ ಎಂದು ಧಾರವಾಡ ಸಹಕಾರ ಹಾಲು ಒಕ್ಕೂಟದ ನೌಕರರ ಕಲ್ಯಾಣ ಸಂಘದ ಅಧ್ಯಕ್ಷರು ಹಾಗೂ ಒಕ್ಕೂಟದ ನಿರ್ದೇಶಕರಾದ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ತಿಳಿಸಿದರು.

  ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಾರ್ಚ-2022 ನೇ ಮಾಹೆಯ ವರೆಗಿನ ಪ್ರೋತ್ಸಾಹಧನದ ಮಾಹಿತಿಯನ್ನು ನಮ್ಮಿಂದ ಕ್ಷೀರಸಿರಿ ತಂತ್ರಾಶದಲ್ಲಿ ಈಗಾಗಲೇ ಅಳವಡಿಸಲಾಗುತ್ತಿದ್ದು, ಕ್ಷೀರಸಿರಿ ಹಾಗೂ ಪ್ರುಟ್ಸ್ ತಂತ್ರಾಶದ ಮಾಹಿತಿಗಳನ್ನು ಸರ್ಕಾರ ಜೋಡಣೆ ಮಾಡಿದ ಕಾರಣ ಮಾರ್ಚ-2022 ನೇ ಮಾಹೆಯ ಮಾಹಿತಿಯನ್ನು ಕ್ಷೀರಸಿರಿ ತಂತ್ರಾಶ ಬಹಳ ನಿಧಾನಗತಿಯಲ್ಲಿ ಕೆಲಸ ಮಾಡುತ್ತಿದ್ದು, ಇದರಿಂದ ಮಾರ್ಚ-2022 ನೇ ಮಾಹೆಯ ರೂ. 5 ಪ್ರೋತ್ಸಾಹಧನದ ಮಾಹಿತಿಯನ್ನು ಅಳವಡಿಸುವಲ್ಲಿ ಸ್ವಲ್ಪ ವಿಳಂಬವಾಗಿದೆ. ಶೀಘ್ರದಲ್ಲಿಯೇ ಮಾರ್ಚ-2022 ನೇ ಮಾಹೆಯ ರೂ. 5 ಪ್ರೋತ್ಸಾಹಧನದ ಮಾಹಿತಿಯನ್ನು ಸಂಪೂರ್ಣವಾಗಿ ಅಳವಡಿಸಲಾಗುವುದು ಎಂದರು.

  300x250 AD

  ಜನವರಿ-2022 ರ ವರೆಗೆ ಸರ್ಕಾರದಿಂದ ಅತ್ಯಂತ ತ್ವರಿತವಾಗಿ ಪ್ರೋತ್ಸಾಹಧನವನ್ನು ಹಾಲು ಉತ್ಪಾದಕ ರೈತರ ಖಾತೆಗೆ ಜಮಾ ಮಾಡಲಾಗಿದ್ದು, ಫೆಬ್ರವರಿ-2022 ನೇ ಮಾಹೆಯ ಪ್ರೋತ್ಸಾಹಧನವು ಕೂಡ ಶೀಘ್ರದಲ್ಲೇ ರೈತರ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಜಮಾ ಆಗಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು. ಹಾಗೂ ಪ್ರೋತ್ಸಾಹಧನ ಜಮಾ ಆಗದ ರೈತರು ಆಯಾ ವ್ಯಾಪ್ತಿಯ ವಿಸ್ತರಣಾಧಿಕಾರಿಗಳನ್ನು ಸಂಪರ್ಕಿಸಲು ಸೂಚಿಸಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top