ಸಿದ್ದಾಪುರ: ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಅವರು ತಟ್ಟಿವೀರಭದ್ರರಾಗಿ ರಂಗದಲ್ಲಿ ಕಾಣಿಕೊಂಡು ಯಕ್ಷಗಾನದಲ್ಲಿ ಗಮನ ಸೆಳೆದರು.
ತಾಲೂಕಿನ ಕಲಗದ್ದೆಯಲ್ಲಿ ಆರಂಭಗೊಂಡ ಶ್ರೀ ವಿನಾಯಕ ಕಲ್ಯಾಣ ಲೀಲೋತ್ಸವದ ಪ್ರಥಮ ದಿನ ದಕ್ಷಯಜ್ಞ ಆಖ್ಯಾನದಲ್ಲಿ ತಟ್ಟಿ ಸಹಿತ ವೀರಭದ್ರನಾಗಿ ರಂಗಸ್ಥಳದ ಬಿಸಿ ಏರಿಸಿದರು.
ಕುಮಟಾದ ಯಕ್ಷಗಾನ ಸಂಶೋಧನಾ ಕೇಂದ್ರವು ಕನ್ನಡ ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಪ್ರದರ್ಶನ ಕಂಡ ದಕ್ಷಯಜ್ಞ ಆಖ್ಯಾನ ಮೆಚ್ಚುಗೆ ಪಾತ್ರವಾಯಿತು.
ನಿರೀಶ್ವರ ಯಾಗವನ್ನು ನಡೆಸುವ ದಕ್ಷನ ಸಂಹಾರಕ್ಕೆ ಪರಂಪರಾಗತ ತಟ್ಟಿ ವೀರಭದ್ರನಾಗಿ ಉತ್ತರ ಕನ್ನಡದವ ಪರಂಪರೆ ಹಳೆ ನೆನಪುಗಳನ್ನು ಡಾ. ಜಿ.ಎಲ್.ಹೆಗಡೆ ಮೂಡಿಸಿದರು.
ದಾಕ್ಷಾಯಿಣಿಯಾಗಿ ಇದೇ ಪ್ರಥಮ ಬಾರಿಗೆ ರಂಗಭೂಮಿ ಕಲಾವಿದೆ ಕು. ಶ್ವೇತಾ ಅರೆಹೊಳೆ ಪಾತ್ರದ ಅರ್ಥಪೂರ್ಣತೆ ಹೆಚ್ಚಿಸಿದರು.
ಈಶ್ವರನಾಗಿ ವಿನಾಯಕ ಹೆಗಡೆ ಕಲಗದ್ದೆ, ದೇವೇಂದ್ರನಾಗಿ ವಿನಯ ಹೊಸ್ತೋಟ, ದಕ್ಷನಾಗಿ ವೆಂಕಟೇಶ ಬೊಗ್ರಿಮಕ್ಕಿ, ಬ್ರಾಹ್ಮಣ ನಾಗಿ ನಾಗೇಂದ್ರ ಮುರೂರು, ಶಂಕರ ದಾನಮಾವ ಇತರರು ಪಾಲ್ಗೊಂಡರು.
ಹಿಮ್ಮೇಳದಲ್ಲಿ ಭಾರ್ಗವ ಹೆಗಡೆ, ಶ್ರೀಪಾದ ಮೂಡಗಾರ, ಆದಿತ್ಯ ಕೇಶೈನ ಕಾಣಿಸಿಕೊಂಡರು.