ಅಂಕೋಲಾ: ತಾಲೂಕಿನ ಹಿಲ್ಲೂರಿನ ವಸತಿ ನಿಲಯದಲ್ಲಿ ತಂಗಿದ್ದ ಕಂದಾಯ ಸಚಿವರು ಶನಿವಾರ ಮುಂಜಾನೆ ಯಲ್ಲಾಪುರದ ಹೊಸಳ್ಳಿ ಗ್ರಾಮಕ್ಕೆ ಕಾರ್ಯಕ್ರಮದ ನಿಮಿತ್ತ ಹೊರಟರು.ಯಲ್ಲಾಪುರ ಮಾರ್ಗವಾಗಿ ತೆರಳುವ ಸಂದರ್ಭದಲ್ಲಿ ರಾಮನಗುಳಿಯ ಶ್ರೀರಾಮಪಾದುಕಾ ದೇವಸ್ಥಾನದ ಬಳಿ ಹಿರಿಯ ಧುರೀಣ ಶ್ರೀಕಾಂತ ಶೆಟ್ಟಿ ಸಚಿವ ಆರ್.ಅಶೋಕರವರನ್ನು ಆತ್ಮೀಯವಾಗಿ ಸ್ವಾಗತಿಸಿ ದೇವಸ್ಥಾನಕ್ಕೆ ಬರಮಾಡಿಕೊಂಡರು.
ಹನುಮ ಜಯಂತಿಯ ಪ್ರಯುಕ್ತ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತಿದ್ದು ಸಚಿವರು ದೇವಸ್ಥಾನಕ್ಕೆ ಆಗಮಿಸಿ ದೇವರ ಪೂಜಾ ಕಾರ್ಯದಲ್ಲಿ ಭಾಗವಹಿಸಿ ದೇವರ ದರ್ಶನವನ್ನು ಪಡೆದರು.ಈ ಸಂದರ್ಭದಲ್ಲಿ ಶಾಸಕಿ ರೂಪಾಲಿ ನಾಯ್ಕ,ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್,ಜಿಲ್ಲಾ ಮಟ್ಟದ ಅಧಿಕಾರಿಗಳು,ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸಾರ್ವಜನಿಕರು ಇದ್ದರು.