• first
  second
  third
  Slide
  previous arrow
  next arrow
 • ರಾಜಕೀಯಕ್ಕೆ ರಾಜೀನಾಮೆ ನೀಡಿದ ನಾಗರಾಜ ನಾಯ್ಕ

  300x250 AD

  ಸಿದ್ದಾಪುರ: ಪುನೀತ್ ರಾಜಕುಮಾರ್ ಆದರ್ಶಗಳನ್ನು ಪಾಲಿಸುವುದಕ್ಕಾಗಿ ರಾಜಕೀಯಕ್ಕೆ ರಾಜೀನಾಮೆ ನೀಡಿರುವುದಾಗಿ ಸಮಾಜವಾದಿ ಪಾರ್ಟಿಯ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ನಾಗರಾಜ ನಾಯ್ಕ ತಿಳಿಸಿದ್ದಾರೆ.

  ಕಳೆದ ಹಲವು ವರ್ಷಗಳಿಂದ ಜಿಲ್ಲೆಯ ಹಾಗೂ ರಾಜ್ಯದ ರಾಜಕಾರಣದಲ್ಲಿ ಗುರುತಿಸಿಕೊಂಡು ಹಾಲಿ ಸಮಾಜವಾದಿ ಪಾರ್ಟಿಯಲ್ಲಿ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷರಾಗಿ ತೊಡಗಿಸಿಕೊಂಡಿದ್ದರು. ಪಾರ್ಟಿಯ ಸಂಘಟನೆ ಹಾಗೂ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದ ನಾಗರಾಜ ನಾಯ್ಕ, ಪುನೀತ್ ರಾಜಕುಮಾರ್ ರವರ ಆದರ್ಶಗಳನ್ನು ಪಾಲಿಸುವುದಕ್ಕಾಗಿ ರಾಜಕೀಯಕ್ಕೆ ರಾಜೀನಾಮೆ ನೀಡಿದ್ದಾರೆ.

  ಈಗ ರಾಜಕೀಯವನ್ನು ಬಿಟ್ಟು ಸಂಪೂರ್ಣವಾಗಿ ಪುನೀತ್ ರಾಜಕುಮಾರ್ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕೆನ್ನುವ ತೀರ್ಮಾನವನ್ನು ಕೈಗೊಂಡಿದ್ದೇನೆ. ಅವರು ಯಾವುದೇ ರಾಜಕೀಯ ಪಾರ್ಟಿಯಲ್ಲಿ ಗುರುತಿಸಿಕೊಂಡಿರಲಿಲ್ಲ. ಪುನೀತ್ ರಾಜಕುಮಾರ್ ಅವರು ಹಾಕಿಕೊಟ್ಟ ಮಾರ್ಗವಾದ (ಅಪ್ಪುವಾದ) ಪ್ರೀತಿ, ಸರಳತೆ, ಉಪಕಾರ, ಸಹಾಯ, ಮಾರ್ಗದರ್ಶನ, ದೇಶಾಭಿಮಾನ ಇವುಗಳೇ ನಮ್ಮ ಮೂಲ ಉದ್ದೇಶವಾಗಿಟ್ಟುಕೊಂಡು ಹಾಗೂ ನಾವು ನಗುವುದು ಇತರರನ್ನು ನಗಿಸುವುದು, ನಾವು ಉತ್ತವಾಗಿ ಬದುಕುವುದು ಇತರರನ್ನು ಉತ್ತಮವಾಗಿ ಬದುಕಲು ಪ್ರೋತ್ಸಾಹಿಸುವುದು ನಮ್ಮ ಗುರಿಯಾಗಿದೆ. ಹಾಗಾಗಿ ಅವರ ಅಭಿಮಾನಿಯಾಗಿ ಅವರ ಆದರ್ಶಗಳನ್ನು ಅಂದರೆ ಅಪ್ಪುವಾದ ಅಳವಡಿಸಿಕೊಂಡು ಹೋಗಬೇಕಾಗಿ ಇರುವುದರಿಂದಾಗಿ ಸಮಾಜ ಸೇವೆಯಲ್ಲಿ ಮುಂದುವರಿಯುತ್ತಿದ್ದೇನೆ. ಆದರೆ ಈ ಮೂಲಕ ನಾನು ರಾಜಕೀಯಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.

  300x250 AD

  ಈ ಕಾರಣಕ್ಕಾಗಿ ನಾನು ಸಮಾಜವಾದಿ ಪಾರ್ಟಿಗೆ ಹಾಗೂ ಸಮಾಜವಾದಿ ಪಾರ್ಟಿಯ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಈ ಮೂಲಕ ನನ್ನ ರಾಜೀನಾಮೆಯನ್ನು ಅಂಗೀಕರಿಸಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇನೆ. ಇಲ್ಲಿಯವರೆಗೂ ನನಗೆ ಪ್ರೋತ್ಸಾಹಿಸಿ, ಮಾರ್ಗದರ್ಶನ ನೀಡಿ ಸಹಕರಿಸಿದ ತಮ್ಮೆಲ್ಲರಿಗೂ ವಂದನೆಗಳು ಎಂದು ನಾಗರಾಜ ನಾಯ್ಕ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

  Share This
  300x250 AD
  300x250 AD
  300x250 AD
  Back to top