• Slide
    Slide
    Slide
    previous arrow
    next arrow
  • ಗೌಡ್ರ ಪ್ರೊ ಕಬಡ್ಡಿ: ಶಿರಸಿಯ ಸೆವೆನ್ ಸ್ಟಾರ್ ಒಕ್ಕಲಿಗರು ಚಾಂಪಿಯನ್

    300x250 AD

    ಸಿದ್ದಾಪುರ: ತಾಲ್ಲೂಕಾ ಕರೆ ಒಕ್ಕಲಿಗರ ಸಮಾವೇಶ ಹಾಗೂ ಗೌಡ್ರ ಪ್ರೊ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ ತಾಲ್ಲೂಕಿನ ದೊಡ್ಮನೆ ವ್ಯಾಪ್ತಿಯ ಚಿಂಗೋಳಮಕ್ಕಿ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಿತು.

    ತಾಲ್ಲೂಕಾ ಕರೆ ಒಕ್ಕಲಿಗರ ಸಂಘ ಹಾಗೂ ಬಿಳೇಗೋಡ-ಉಡಳ್ಳಿ ನಾಗರಿಕರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಊರಿನ ಹಿರಿಯರಾದ ಅಮ್ಮು ಬೀರಾ ಗೌಡ ಚಾಲನೆ ನೀಡಿದರು. ತಾಲ್ಲೂಕಿನಾದ್ಯಂತ ಗುರುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಸಮಾವೇಶದ ಸಿದ್ಧತೆಗಳು ಸಂಪೂರ್ಣ ನೀರುಪಾಲಾದರು ಕೂಡ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇದೇ ರಿತಿ ಮುಂದಿನ ದಿನಗಳಲ್ಲಿಯೂ ಸಮುದಾಯದ ಪ್ರಗತಿಗೆ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕ್ಕೊಳ್ಳುವಂತೆ ಸಲಹೆ ನೀಡಿದರು.

    ಬಳಿಕ ಮಾತನಾಡಿದ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದ ಅಧ್ಯಕ್ಷ ಸುಬ್ರಾಯ ಗೌಡ, ಯಾವುದೇ ಒಂದು ಕಾರ್ಯಕ್ರಮದ ಆಯೋಜನೆಗೆ ಒಗ್ಗಟ್ಟು, ಸಹಕಾರ ಅತಿ ಮುಖ್ಯವಾಗಿರುತ್ತದೆ. ಇಂತಹ ಕಾರ್ಯಕ್ರಮಗಳು ಸಮಾಜದ ಏಳ್ಗೆಗೆ ಕಾರಣವಾಗುವ ಕಾರಣ ಸಂಘದಿಂದ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

    ಇದೇ ವೇಳೆ ಸರ್ಕಾರಿ ಸೇವೆಯಿಂದ ನಿವೃತ್ತರಾದ ಮಾಜಿ ಸೈನಿಕ ಷಣ್ಮುಖ ಗೌಡ ಕಲಕೈ, ಗಣಪತಿ ಪುಟ್ಟಾ ಗೌಡ, ಹುಲಿಯಾ ಗೌಡ, ಬಿಎಸ್‍ಎಫ್‍ನಲ್ಲಿ ಕರ್ತವ್ಯ ನಿಭಾಯಿಸುತ್ತಿರುವ ಯೋಧೆ ಯಶಸ್ವಿನಿ ಗೌಡ ಅವರ ತಂದೆ ರಾಮ ಗೌಡ ಮತ್ತು ಕ್ರೀಡಾಪಟು ಮೋನಿಕಾ ಗೌಡ ಅವರನ್ನು ಸನ್ಮಾನಿಸಲಾಯಿತು. ಬಳಿಕ ಹಸಗೋಡದ ದುರ್ಗಾಪರಮೇಶ್ವರಿ ದೊಳ್ಳಿನ ತಂಡ ಹಾಗೂ ಕಟ್ಟೆಕೈ ಮಹಾಸತಿ ಡೊಳ್ಳಿನ ತಂಡದಿಂದ ಡೊಳ್ಳಿನ ಕುಣಿತ ಮತ್ತು ಸಾವಲಗದ್ದೆಯ ಬಸವೇಶ್ವರ ಕಲಾ ಬಳಗದಿಂದ ಗುಮಟೆ ಪಾಂಗು ಎಲ್ಲರ ಗಮನ ಸೆಳೆಯಿತು.

    300x250 AD

    ಕಾರ್ಯಕ್ರಮದ ಬಳಿಕ ಆಯೋಜಿಸಿದ್ದ ಗೌಡ್ರ ಪ್ರೊ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನವನ್ನು ಶಿರಸಿಯ ಮಲೆನಹಳ್ಳಿಯ ಸೆವೆನ್ ಸ್ಟಾರ್ ಒಕ್ಕಲಿಗರು, ದ್ವಿತೀಯ ಬಹುಮಾನ ಸಿದ್ದಾಪುರದ ಬಿರ್ಲಮಕ್ಕಿಯ ಬಿ.ಪಿ ಬಾಯ್ಸ್ ತಂಡ, ತೃತೀಯ ಬಹುಮಾನವನ್ನು ಸೊರಬಾ ತಂಡ ಮತ್ತು ಚತುರ್ಥ ಬಹುಮಾನವನ್ನು ನೈಗಾರ ತಂಡ ಪಡೆದುಕೊಂಡಿದೆ.

    ಶಿರಸಿ ಕರೆ ಒಕ್ಕಲಿಗರ ಸಂಘದ ಅಧ್ಯಕ್ಷ ಅರುಣ ಗೌಡ, ರವೀಶ ಗೌಡ ಹುತ್ಗಾರ್, ಬೀರಾ ಗೌಡ ಉಡಳ್ಳಿ, ಶ್ರೀಧರ ಗೌಡ ಮುಂಡ್ಗೆಹಳ್ಳಿ, ಚಿನ್ನು ಗೌಡ ಅತ್ತಿಸವಲು, ಸೀತಾರಾಮ ಗೌಡ ಉಡಳ್ಳಿ, ಕೇಶವ ಗೌಡ ಉಡಳ್ಳಿ, ರಾಮಗೌಡ ತಲಗಾರ, ವಸುಮತಿ ಗೌಡ, ಮಾದೇವಿ ಗೌಡ. ವಾಮನ ಗೌಡ, ನಾಗಪತಿ ಗೌಡ ಸೇರಿದಂತೆ ಊರ ನಾಗರಿಕರು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top