ಸಿದ್ದಾಪುರ: ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಅವರು ಶನಿವಾರ ಸಂಜೆ 5ಕ್ಕೆ ತಟ್ಟಿವೀರಭದ್ರರಾಗಿ ರಂಗದಲ್ಲಿ ಕಾಣಿಕೊಳ್ಳಲಿದ್ದಾರೆ.
ತಾಲೂಕಿನ ಕಲಗದ್ದೆಯಲ್ಲಿ ಆರಂಭಗೊಂಡ ಶ್ರೀ ವಿನಾಯಕ ಕಲ್ಯಾಣ ಲೀಲೋತ್ಸವದ ಪ್ರಥಮ ದಿನ ಶನಿವಾರ ಸಂಜೆ 5ಕ್ಕೆ ದಕ್ಷಯಜ್ಞ ಆಖ್ಯಾನ ನಡೆಯಲಿದೆ.
ಕುಮಟಾದ ಯಕ್ಷಗಾನ ಸಂಶೋಧನಾ ಕೇಂದ್ರ ನಡೆಸುವ ಇದರಲ್ಲಿ ನಿರೀಶ್ವರ ಯಾಗವನ್ನು ನಡೆಸುವ ದಕ್ಷನ ಸಂಹಾರಕ್ಕೆ ಪರಂಪರಾಗತ ತಟ್ಟಿ ವೀರಭದ್ರನಾಗಿ ರಂಗದಲ್ಲಿ ಡಾ. ಜಿ.ಎಲ್.ಹೆಗಡೆ ಕಾಣಿಸಿಕೊಳ್ಳಲಿದ್ದಾರೆ.
ದಾಕ್ಷಾಯಿಣಿಯಾಗಿ ಇದೇ ಪ್ರಥಮಬಾರಿಗೆ ರಂಗಭೂಮಿ ಕಲಾವಿದೆ ಕು. ಶ್ವೇತಾ ಅರೆಹೊಳೆ ಕಾಣಿಸಿಕೊಳ್ಳಲಿದ್ದಾರೆ. ಈಶ್ವರನಾಗಿ ವಿನಾಯಕ ಹೆಗಡೆ ಕಲಗದ್ದೆ, ದೇವೇಂದ್ರನಾಗಿ ವಿನಯ ಹೊಸ್ತೋಟ, ದಕ್ಷನಾಗಿ ವೆಂಕಟೇಶ ಬೊಗ್ರಿಮಕ್ಕಿ, ಬ್ರಾಹ್ಮಣ ನಾಗಿ ನಾಗೇಂದ್ರ ಮುರೂರು, ಶಂಕರ ದಾನಮಾವ ಇತರರು ಪಾಲ್ಗೊಳ್ಳುವರು.
ಹಿಮ್ಮೇಳದಲ್ಲಿ ಭಾರ್ಗವ ಹೆಗಡೆ ತಂಡ ಕಾಣಿಸಿಕೊಳ್ಳಲಿದೆ.